ನವದೆಹಲಿ: ಎನ್ಸಿಪಿ ಶರದ್ ಪವಾರ್ ಬಣದ ನಾಯಕ ಜಿತೇಂದ್ರ ಅವಾದ್ ಅವರ ಹೇಳಿಕೆಯ ಬಗ್ಗೆ ಅಯೋಧ್ಯೆಯ ಪರಮಹಂಸ ಆಚಾರ್ಯ ದೊಡ್ಡ ಹೇಳಿಕೆ ನೀಡಿದ್ದು, ಜೀತೇಂದ್ರ ಅವಾದ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾನು ಅವರನ್ನು ಕೊಲ್ಲುತ್ತೇನೆ ಎಂದು ಹೇಳಿದ್ದಾರೆ.
“ಜಿತೇಂದ್ರ ಅವಾದ್ ಅವರ ಹೇಳಿಕೆ ಅವಹೇಳನಕಾರಿ ಮತ್ತು ಭಗವಾನ್ ರಾಮ ಭಕ್ತರ ಭಾವನೆಗಳನ್ನು ನೋಯಿಸುತ್ತದೆ… ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ನಾನು ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ. “ಭಗವಾನ್ ರಾಮನ ಬಗ್ಗೆ ತಪ್ಪಾಗಿ ಮಾತನಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ… ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ನಾನು ಜಿತೇಂದ್ರ ಅವಾದ್ ಅವರನ್ನು ಕೊಲ್ಲುತ್ತೇನೆ” ಎಂದು ಹೇಳಿದ್ದಾರೆ.
ಈ ಹಿಂದೆ ಎನ್ಸಿಪಿ ನಾಯಕ ಜಿತೇಂದ್ರ ಅವಾದ್ ರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ರಾಮ ನಮ್ಮವನು ಮತ್ತು ಅವನು ಬಹುಜನಕ್ಕೆ ಸೇರಿದವನು, ರಾಮ ಸಸ್ಯಾಹಾರಿಯಲ್ಲ, ಅವನು ಮಾಂಸಾಹಾರಿ. ಅವರು ಬೇಟೆಯಾಡಿ ತಿನ್ನುತ್ತಿದ್ದರು ಎಂದು ಜಿತೇಂದ್ರ ಅವಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.