ನನಗೆ ಕಾಂಗ್ರೆಸ್ ನಿಂದ ಟಿಕೆಟ್ ಆಫರ್ ಬಂದಿತ್ತು; ಕಂಗನಾ ರಣಾವತ್ ಅಚ್ಚರಿಯ ಹೇಳಿಕೆ…..! 18-09-2024 12:31PM IST / No Comments / Posted In: Latest News, India, Live News ತಮ್ಮ ಮಾತುಗಳಿಂದ ವಿವಾದಗಳಿಗೆ ಈಡಾಗುವ ಬಾಲಿವುಡ್ ನಟಿ, ಸಂಸದೆ ಕಂಗನಾ ರಣಾವತ್ ತನ್ನ ಇತ್ತೀಚಿನ ಸಂದರ್ಶನದಲ್ಲಿ ಮತ್ತೆ ವಿವಾದದ ಅಲೆ ಹುಟ್ಟುಹಾಕುವಂತಹ ಹೇಳಿಕೆ ನೀಡಿದ್ದು ಅಚ್ಚರಿ ಮೂಡಿಸಿದ್ದಾರೆ. ರಾಹುಲ್ ಗಾಂಧಿಯಂತಹ ರಾಜಕಾರಣಿಗಳಿಂದ ಹಿಡಿದು ಬಾಲಿವುಡ್ ತಾರೆಯರನ್ನು ಟೀಕಿಸುವವರೆಗೆ, ತಮ್ಮ ಚಿತ್ರ ಎಮರ್ಜೆನ್ಸಿ ಬಿಡುಗಡೆಯ ವಿಳಂಬದ ಬಗ್ಗೆಯೂ ಮಾತನಾಡಿದ್ದಾರೆ. ತಮ್ಮ ಚೊಚ್ಚಲ ಚಿತ್ರ ಗ್ಯಾಂಗ್‌ಸ್ಟರ್‌ನ ನಂತರ ತಮಗೆ ಕಾಂಗ್ರೆಸ್ ಟಿಕೆಟ್ ನೀಡುವುದಾಗಿ ಆಫರ್ ಬಂದಿತ್ತು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕಂಗನಾ ರಣಾವತ್ ತನ್ನ ಮೊದಲ ಚಿತ್ರ ಗ್ಯಾಂಗ್‌ಸ್ಟರ್ (2006) ನಂತರ ಕಾಂಗ್ರೆಸ್ ನಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಆಫರ್ ನೀಡಲಾಗಿತ್ತು ಎಂದು ಬಹಿರಂಗಪಡಿಸಿದರು. ಕಂಗನಾ ಅವರ ಮುತ್ತಜ್ಜ ಸರ್ಜು ಸಿಂಗ್ ರನೌತ್ ಅವರು ವಿಧಾನಸಭೆಯ ಸದಸ್ಯರಾಗಿದ್ದರು ಮತ್ತು ಅವರ ಅಜ್ಜ ಐಎಎಸ್ ಅಧಿಕಾರಿಯಾಗಿದ್ದರು. ತನ್ನ ತಂದೆ, ಅಜ್ಜ ಮತ್ತು ಮುತ್ತಜ್ಜ ಎಲ್ಲರೂ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದರು ಎಂದು ಅವರು ಬಹಿರಂಗಪಡಿಸಿದರು. ರಾಹುಲ್ ಗಾಂಧಿಯನ್ನು ಅಪಾಯಕಾರಿ ವ್ಯಕ್ತಿ ಎಂದು ಕರೆದಿರುವ ಅವರು, ರಾಹುಲ್ ಗಾಂಧಿ ಅವರು ತಮ್ಮ ಅಜ್ಜಿ – ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕೊಲೆಗಾರ ಭಿಂದ್ರನ್‌ವಾಲೆಯನ್ನು ಭಯೋತ್ಪಾದಕ ಎಂದು ಪರಿಗಣಿಸುತ್ತಾರೆಯೇ ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿ ಇದಕ್ಕೆ ಉತ್ತರಿಸಿದರೆ ತಾನು ತನ್ನ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಮತ್ತು ಇನ್ನೆಂದಿಗೂ ಸಂಸತ್ತಿಗೆ ಹೋಗುವುದಿಲ್ಲ ಎಂದು ಹೇಳಿದರು. ಸೆಪ್ಟೆಂಬರ್ 8 ರಂದು ಬಿಡುಗಡೆಗೆ ಯೋಜಿಸಲಾಗಿದ್ದ ತಮ್ಮ ಚಲನಚಿತ್ರ ಎಮರ್ಜೆನ್ಸಿ ಬಿಡುಗಡೆ ವಿಳಂಬದ ಬಗ್ಗೆ ಮಾತನಾಡಿದ ಅವರು ಇನ್ನೂ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದೇವೆ. ಸಮಾಜದ ಒಂದು ಸಣ್ಣ ವರ್ಗ ಮಾತ್ರ ತನ್ನ ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಹೇಳಿದರು. ಸಿಖ್ಖರನ್ನು ಪ್ರತ್ಯೇಕತಾವಾದಿಗಳೆಂದು ತೋರಿಸುವ ಆಕ್ಷೇಪವನ್ನು ಪ್ರಶ್ನಿಸಿದ್ದಕ್ಕೆ, ಸಿಖ್ ಇತಿಹಾಸದಲ್ಲಿ ವಿವಾದಾತ್ಮಕ ವ್ಯಕ್ತಿ ಭಿಂದ್ರನ್‌ವಾಲೆ ಅವರ ಉದಾಹರಣೆಯನ್ನು ನೀಡಿದರು.”ಇದನ್ನು ನಮ್ಮ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಮರೆಮಾಡಲಾಗಿದೆ. ಈ ಬಗ್ಗೆ ನಮಗೆ ಹೇಳಲಾಗಿಲ್ಲ. ಇದು ಒಳ್ಳೆ ಜನರ ಕಾಲವಲ್ಲ. ಒಳ್ಳೆಯ ಜನರ ಸಮಯ ಕಳೆದಿದೆ” ಎಂದು ಹೇಳಿದರು. ಎಮರ್ಜೆನ್ಸಿ ಚಿತ್ರ ಬಿಡುಗಡೆ ತಡವಾಗಿರುವುದರಿಂದ ಕಂಗನಾ ರಣಾವತ್ ತಮ್ಮ ನಿರ್ಮಾಣ ಸಂಸ್ಥೆಯಾದ ಮಣಿಕರ್ಣಿಕಾ ಫಿಲ್ಮ್ಸ್ ನ ಕಚೇರಿಯಾಗಿ ಬಳಸಲಾಗಿದ್ದ ಮುಂಬೈ ಬಂಗಲೆಯನ್ನು 32 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. “ಸ್ವಾಭಾವಿಕವಾಗಿ ನನ್ನ ಚಿತ್ರ ಎಮರ್ಜೆನ್ಸಿ ಬಿಡುಗಡೆಯಾಗಬೇಕಿತ್ತು. ನಾನು ನನ್ನ ಎಲ್ಲಾ ವೈಯಕ್ತಿಕ ಆಸ್ತಿಯನ್ನು ಅದರ ಮೇಲೆ ಹಾಕಿದ್ದೇನೆ. ಈಗ ಅದು ಬಿಡುಗಡೆಯಾಗಿಲ್ಲ. ಆದ್ದರಿಂದ ಹೇಗಾದರೂ ಮಾಡಿ ಬಿಕ್ಕಟ್ಟಿನ ಸಮಯದಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದರು. "I was offered a Congress ticket after 'Gangster'," claims #KanganaRanaut (@KanganaTeam) at #News18IndiaChaupal She also says she takes 'panga' (picks up fights) for the country, not for personal gains because she's not a "coward"@AMISHDEVGAN | #News18IndiaChaupal… pic.twitter.com/QXLoipUo1R — News18 (@CNNnews18) September 17, 2024 Kangana's interview lays out straightforward facts and truths : 1. Choose your heroes wisely. Endorsing products like pan masala and gutkha on screen is far from heroic. 2. She sheds light on how item songs can negatively influence society, especially shaping the minds of… pic.twitter.com/IjEuXE7n2H — Rahul Chauhan (@RahulCh9290) September 16, 2024 Kangana at her office today #KanganaRanaut pic.twitter.com/Li8yhwFsgg — Kangana Ranaut Updates ✨️ (@KanganaUpdates) July 19, 2024