
ಸ್ಕೀಯಿಂಗ್ ಎಷ್ಟು ರೋಮಾಂಚನಕಾರಿ ಕ್ರೀಡೆಯೋ ಅಷ್ಟೇ ಅಪಾಯಕಾರಿಯೂ ಹೌದು. ಅಮೆರಿಕದ ಮೌಂಟ್ ಬೇಕರ್‌ನಲ್ಲಿ ಸ್ಕೀಯಿಂಗ್ ಮಾಡುತ್ತಿದ್ದ ಸಾಹಸಿಗರೊಬ್ಬರು ಆಯ ತಪ್ಪಿ ಹೇಗೆ ಮರದಡಿ ಮುಚ್ಚಿಹೋಗಿದ್ದಾರೆ ಎಂದು ತೋರುವ ವಿಡಿಯೋವೊಂದು ವೈರಲ್ ಆಗಿದೆ.
ಸಾಮಾನ್ಯವಾಗಿ ಅಕ್ಕಪಕ್ಕದ ಪ್ರದೇಶಗಳಿಗಿಂತ ಮರದ ಕೆಳಗಿನ ಜಾಗದಲ್ಲಿ ಕಡಿಮೆ ಹಿಮ ತುಂಬಿಕೊಳ್ಳುವ ಕಾರಣ, ಇಲ್ಲಿ ಜಾರಿ ಬೀಳುವುದು ಬಹಳ ಅಪಾಯಕಾರಿಯಾಗಿರುತ್ತದೆ.
ಫ್ರಾನ್ಸಿಸ್ ಜ಼ುಬೇರ್ ಹೆಸರಿನ ಈ ಸ್ಕೀಯರ್ ಹಿಮದ ಬ್ಲಾಂಕೆಟ್‌ಗಳ ಮೇಲೆ ಸ್ಕೀಯಿಂಗ್ ಮಾಡುತ್ತಿರುವುದನ್ನು ತೋರುವ ವಿಡಿಯೋದಲ್ಲಿ, ಸ್ಕೀಯಿಂಗ್ ಮಾಡಿಕೊಂಡು ಮರಗಳ ನಡುವೆ ಹಾದು ಹೋಗುವ ವೇಳೆ ಒಬ್ಬರು ಅಲ್ಲಿ ಜಾರಿ ಬಿದ್ದಿರುವುದು ಅವರ ಗಮನಕ್ಕೆ ಬರುತ್ತದೆ. ಕೂಡಲೇ ಆತನತ್ತ ಧಾವಿಸುವ ಫ್ರಾನ್ಸಿಸ್, “ಯೂ ಆಲ್ರೈಟ್? ಯೂ ಓಕೆ?” ಎಂದು ಕೇಳುತ್ತಿರುವುದನ್ನು ನೋಡಬಹುದಾಗಿದೆ.
ಕೂಡಲೇ ಭಾರೀ ಪ್ರಮಾಣದಲ್ಲಿ ಅಲ್ಲಿದ್ದ ಹಿಮವನ್ನು ತೆರವುಗೊಳಿಸುವ ಫ್ರಾನ್ಸಿಸ್, ಆ ವ್ಯಕ್ತಿಯ ಮೇಲೆ ತುಂಬಿಕೊಂಡಿದ್ದ ಹಿಮವನ್ನೆಲ್ಲಾ ತೆರವುಗೊಳಿಸಿದ್ದಾರೆ ಫ್ರಾನ್ಸಿಸ್.
ಹೀಗೆ ಹಿಮದಡಿ ಸಿಲುಕಿಕೊಂಡಿದ್ದ ಇಯಾನ್ ಸ್ಟೆಗರ್ ತಮ್ಮ ಅನುಭವವನ್ನು ’ಕೋಮೋ ನ್ಯೂಸ್’ ವಾಹಿನಿಯಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಆಗಾಗ ಸ್ನೋಬೋರ್ಡಿಂಗ್ ಮಾಡುವ ಸ್ಟೆಗರ್, ಅಲ್ಲಿನ ಮರಗಳ ನಡುವೆ ಹೀಗೆ ತಗುಲಿ ಹಾಕಿಕೊಂಡಿದ್ದಾರೆ. ಅವರೊಂದಿಗೆ ಇದ್ದ ಸ್ನೇಹಿತರು ಮುಂದೆ ಸಾಗಿದ್ದು, ರೇಡಿಯೊ ಸಿಗ್ನಲ್ ಮೂಲಕ ಅವರನ್ನು ಸಂಪರ್ಕಿಸಲು ಸಾಧ್ಯವಾಗದೇ ಇದ್ದ ಕಾರಣ ಇಯಾನ್ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದರು.