ಸಮಾಜದ ತಾರತಮ್ಯವನ್ನು ಮೀರಿ ಬೆಳೆಯಲು ಛಲ ತೊಟ್ಟಿರುವ ರಾಜಾವಿ ಸೂರತ್‌ನಲ್ಲಿರುವ ತಮ್ಮ ಅಂಗಡಿ ಒಂದಲ್ಲ ಒಂದು ದಿನ ಜನಪ್ರಿಯವಾಗುತ್ತದೆ ಎಂದು ಬಲವಾಗಿ ನಂಬಿದ್ದಾರೆ.
ಲಿಂಗ ಬದಲಿಸಿಕೊಂಡು ಮಹಿಳೆಯಾದ ರಾಜಾವಿಗೆ ಆಕೆಯ ಕುಟುಂಬದಿಂದ ಭಾರೀ ಅಸಮಾಧಾನ ಎದುರಿಸಬೇಕಾಗಿ ಬಂದಿತ್ತು. ಆದರೂ ರಾಜಾವಿ ಹಿಂದೆ ಬಂಡೆಯಂತೆ ನಿಂತ ಆಕೆಯ ತಾಯಿ ರಾಜಾವಿಗೆ ತನ್ನದೇ ಗುರುತು ಸೃಷ್ಟಿಸಿಕೊಳ್ಳಲು ನೆರವಾಗಿದ್ದಾರೆ. ಸ್ವಾವಲಂಬಿಯಾಗಿ ಬದುಕುವ ಮೂಲಕ ಸಲಿಂಗಿಗಳ ಸಮೂಹವನ್ನು ಸಮಾಜ ನೋಡುವ ದೃಷ್ಟಿ ಬದಲಿಸುವ ಪಣ ತೊಟ್ಟಿದ್ದಾರೆ ರಾಜಾವಿ.
ಬೇರೆ ಮಕ್ಕಳ ಜೊತೆ ನಿಮ್ಮ ಮಕ್ಕಳನ್ನು ಎಂದೂ ಹೋಲಿಕೆ ಮಾಡಬೇಡಿ
ರಾಜೀವ್ ಆಗಿ ಹುಟ್ಟಿದ ರಾಜಾವಿ, 32ನೇ ವಯಸ್ಸಿನಲ್ಲಿ ಮಹಿಳೆಯರ ಬಟ್ಟೆ ಧರಿಸಲು ಆರಂಭಿಸಿ, ಹೆಣ್ಣಾಗಿ ಪರಿವರ್ತನೆಯಾಗಲು ನಿರ್ಧರಿಸಿದ್ದಾರೆ. ಅವರ ಈ ನಡೆಯಿಂದ ಸಿಟ್ಟೆಗೆದ್ದ ಆಕೆಯ ತಂದೆ ಮನೆಯಿಂದ ಹೊರಗಟ್ಟಿದ್ದಾರೆ. ಇದಾದ ಮೇಲೆ ತಮ್ಮ ಹೆಸರನ್ನು ರಾಜಾವಿ ಎಂದು ಬದಲಿಸಿಕೊಂಡಿದ್ದಾರೆ ಈಕೆ.