ನವದೆಹಲಿ: ಬಾಂಗ್ಲಾದೇಶದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ನಾನು 20 -22 ವರ್ಷದವನಿದ್ದಾಗ ಬಾಂಗ್ಲಾ ದೇಶದ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮಾಡಿದ್ದೆ ಎಂದು ತಿಳಿಸಿದ್ದಾರೆ.
ಬಾಂಗ್ಲಾದೇಶ ಪಾಕಿಸ್ತಾನದಿಂದ ವಿಮೋಚನೆಯಾಗಿ 50 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದಾರೆ.
1971 ಸ್ವಾತಂತ್ರ್ಯದ ಯುದ್ಧದಲ್ಲಿ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ನಾಯಕತ್ವ ಮತ್ತು ಭಾರತೀಯ ಸೇನೆಯ ಕೊಡುಗೆಯನ್ನು ಮೋದಿ ಶ್ಲಾಘಿಸಿದ್ದಾರೆ. 1971 ರ ಸ್ವಾತಂತ್ರ್ಯ ಸಂಗ್ರಾಮವನ್ನು ನೆನಪಿಸಿಕೊಂಡ ಅವರು, ಪಾಕಿಸ್ತಾನ ಸೇನೆ ಅಂದಿನ ಪೂರ್ವ ಪಾಕಿಸ್ತಾನ ಈಗಿನ ಬಾಂಗ್ಲಾದೇಶದ ಜನರ ಮೇಲೆ ದೌರ್ಜನ್ಯ ನಡೆಸಿತ್ತು ಎಂದು ಹೇಳಿದ್ದಾರೆ.
ನಾನು ಬಾಂಗ್ಲಾದೇಶದ ಸಹೋದರ ಸಹೋದರಿಯರಿಗೆ ಹೆಮ್ಮೆಯಿಂದ ನೆನಪಿಸಲು ಬಯಸುತ್ತೇನೆ. ನಾನು ಬಾಂಗ್ಲಾ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಇದು ನನ್ನ ಜೀವನದ ಮೊದಲ ಚಳವಳಿಗಳಲ್ಲಿ ಒಂದಾಗಿದೆ. ನಾನು ಮತ್ತು ನನ್ನ ಸಹೋದ್ಯೋಗಿಗಳು ಸತ್ಯಾಗ್ರಹ ಮಾಡಿದಾಗ ನಮಗೆ 20 ರಿಂದ 22 ವರ್ಷ ವಯಸ್ಸಿರಬಹುದು ಎಂದು ತಿಳಿಸಿದ್ದಾರೆ.