ಈ ವಿತ್ತೀಯ ವರ್ಷದಲ್ಲಿ 1.5 ಲಕ್ಷ ಕೋಟಿ ರೂಪಾಯಿಗಳಷ್ಟು ಆದಾಯ ತೆರಿಗೆ ರಿಟರ್ನ್ಸ್ ವಿತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಲೆಕ್ಕಾಚಾರದ ವರ್ಷ 2021-22ರಲ್ಲಿ 1.1 ಕೋಟಿಯಷ್ಟು ರೀಫಂಡ್‌ಗಳನ್ನು ಇದು ಒಳಗೊಂಡಿದ್ದು, ಒಟ್ಟಾರೆ 21,323.55 ಕೋಟಿಗಳಷ್ಟಾಗುತ್ತದೆ.
“ಏಪ್ರಿಲ್ 1, 2021ರಿಂದ 3 ಜನವರಿ, 2022ರ ನಡುವೆ ಕೇಂದ್ರ ನೇರ ತೆರಿಗೆ ಮಂಡಳಿಯು 1.48 ಕೋಟಿ ತೆರಿಗೆದಾರರ 1,50,407 ಲಕ್ಷ ಕೋಟಿ ರೂ.ಗಳಷ್ಟು ರೀಫಂಡ್‌ಗಳನ್ನು ವಿತರಿಸಿದೆ,” ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
ಇದರಲ್ಲಿ 51,194 ಕೋಟಿ ರೂಪಾಯಿಗಳನ್ನು ವೈಯಕ್ತಿಕ ರಿಟರ್ನ್ಸ್‌ನ 1.46 ಕೋಟಿ ಪ್ರಕರಣಗಳು ಮತ್ತು 99,213 ಕೋಟಿ ರೂಪಾಯಿಗಳನ್ನು ಕಾರ್ಪೋರೇಟ್ ರಿಟರ್ನ್ಸ್ ರೂಪದಲ್ಲಿ 2.19 ಲಕ್ಷ ಪ್ರಕರಣಗಳಲ್ಲಿ ವಿತರಿಸಲಾಗಿದೆ.