alex Certify BIG NEWS: 23.99 ಲಕ್ಷ ತೆರಿಗೆ ಪಾವತಿದಾರರಿಗೆ 67,401 ಕೋಟಿ ರೂಪಾಯಿ ಮರುಪಾವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 23.99 ಲಕ್ಷ ತೆರಿಗೆ ಪಾವತಿದಾರರಿಗೆ 67,401 ಕೋಟಿ ರೂಪಾಯಿ ಮರುಪಾವತಿ

ಕೇಂದ್ರೀಯ ನೇರ ತೆರಿಗೆ ಮಂಡಳಿಯು 23.99 ಲಕ್ಷ ತೆರಿಗೆ ಪಾವತಿದಾರರಿಗೆ ಏಪ್ರಿಲ್​ 1 ರಿಂದ ಆಗಸ್ಟ್​ 30ರ ಅವಧಿಯಲ್ಲಿ 67,401 ಕೋಟಿ ರೂಪಾಯಿ ಹಣವನ್ನು ಮರುಪಾವತಿ ಮಾಡಿರೋದಾಗಿ ಭಾರತೀಯ ಆದಾಯ ತೆರಿಗೆ ಇಲಾಖೆ ಹೇಳಿದೆ.

22,61,918 ಪ್ರಕರಣಗಳು ಹಾಗೂ ಕಾರ್ಪೋರೇಟ್​ ತೆರಿಗೆ ಮರುಪಾವತಿಗಳಲ್ಲಿ 16,373 ಕೋಟಿ ರೂಪಾಯಿಯನ್ನು ನೀಡಿದೆ. 1,37,327 ಪ್ರಕರಣಗಳಲ್ಲಿ 51,029 ಕೋಟಿ ರೂಪಾಯಿ ನೀಡಿದೆ ಎಂದು ಆದಾಯ ತೆರಿಗೆ ಮಾಹಿತಿ ನೀಡಿದೆ.

ಆದಾಯ ತೆರಿಗೆ ಇಲಾಖೆಯು ಹೊಸ ಇ ಫೈಲಿಂಗ್​ ಪೋರ್ಟಲ್​ಗೆ ಸಂಬಂಧಿಸಿ ತೆರಿಗೆದಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ನಡುವೆಯೇ ಈ ಬೆಳವಣಿಗೆ ಉಂಟಾಗಿದೆ. ಇದೇ ಸಮಸ್ಯೆಯಿಂದಾಗಿ ಅನೇಕ ತೆರಿಗೆ ಪಾವತಿದಾರರು ಐಟಿ ರಿರ್ಟನ್ಸ್​​ ಪಾವತಿ ಮಾಡಬೇಕಿದೆ.

ಸಾಮಾನ್ಯವಾಗಿ ತೆರಿಗೆ ಪಾವತಿ ಮಾಡಿದ 10 ದಿನಗಳಲ್ಲಿ ಮರುಪಾವತಿ ನೀಡಲಾಗುತ್ತದೆ. ಆದರೆ ಅನೇಕ ಕಾರಣಗಳಿಂದ ಇದು ವಿಳಂಬ ಕೂಡ ಆಗಬಹುದು. ಆದಾಗ್ಯೂ ನೀವು ಮರುಪಾವತಿ ಸ್ವೀಕರಿಸದೇ ಹೋದಲ್ಲಿ ಈ ಬಗ್ಗೆ ಐಟಿ ಇಲಾಖೆಯ ಅಧಿಕೃತ ವೆಬ್​ಸೈಟ್​ incometaxindia.gov.in ನಲ್ಲಿ ಮಾಹಿತಿ ಪಡೆಯಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...