ಸ್ವಿಸ್ ಬ್ಯಾಂಕ್ ನಲ್ಲಿ ಹಣ ಠೇವಣಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಉದ್ಯಮಿ ಅನಿಲ್ ಅಂಬಾನಿಗೆ ಸಂಕಷ್ಟ ಎದುರಾಗಿದೆ. ಅವರ ಒಡೆತನದ ಎರಡು ಕಂಪನಿಗಳು ಸ್ವಿಸ್ ಬ್ಯಾಂಕ್ ನಲ್ಲಿ 814 ಕೋಟಿ ರೂ. ಠೇವಣಿ ಹೊಂದಿದ್ದು, ಈ ಕುರಿತ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ನೀಡಿಲ್ಲವೆಂದು ಹೇಳಲಾಗಿದೆ.
ಈ ಹಣದ ಮಾಹಿತಿ ನೀಡದೆ 420 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಮಂಗಳವಾರದಂದು ಅನಿಲ್ ಅಂಬಾನಿಯವರಿಗೆ ನೋಟಿಸ್ ಜಾರಿ ಮಾಡಿದೆ. ತೆರಿಗೆ ವಂಚಿಸುವ ಸಲುವಾಗಿಯೇ ಉದ್ದೇಶಪೂರ್ವಕವಾಗಿ ವಿದೇಶದಲ್ಲಿ ಇರುವ ಹಣದ ಕುರಿತು ಮಾಹಿತಿ ನೀಡಿರಲಿಲ್ಲವೆಂದು ಆರೋಪಿಸಲಾಗಿದೆ.
ಕಪ್ಪು ಹಣ ಕಾಯ್ದೆ ಸೆಕ್ಷನ್ 50 ಹಾಗು 51ರ ಅಡಿಯಲ್ಲಿ ವಿದೇಶದಲ್ಲಿ ಹಣವಿಟ್ಟಿರುವ ಕುರಿತಂತೆ ಅನಿಲ್ ಅಂಬಾನಿಯವರ ವಿರುದ್ಧದ ಆರೋಪ ಸಾಬೀತಾದರೆ ಅವರಿಗೆ ದಂಡ ಸಹಿತವಾಗಿ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. 2012 – 13 ರಿಂದ 2019 – 20 ರ ವರೆಗೆ ಅನಿಲ್ ಅಂಬಾನಿಯವರು ತಾವು ವಿದೇಶದಲ್ಲಿ ಇಟ್ಟಿರುವ ಹಣದ ಕುರಿತು ಮಾಹಿತಿ ನೀಡಿರಲಿಲ್ಲವೆಂದು ಹೇಳಲಾಗಿದೆ.