
ಮಹೇಂದ್ರ ಸಿಂಗ್ ಧೋನಿ ಎಂಬ ಹೆಸರಿಗೆ ದೇಶದೆಲ್ಲೆಡೆ ಅದ್ಯಾವ ಮಟ್ಟದಲ್ಲಿ ಕ್ರೇಜ಼್ ಇದೆ ಎಂಬುದು ತಿಳಿಸಿ ಹೇಳಬೇಕಾದ ಸಂಗತಿಯಲ್ಲ. ಕೋಟ್ಯಂತರ ಅಭಿಮಾನಿಗಳಿಗೆ ಆರಾಧ್ಯರಾಗಿರುವ ಧೋನಿರನ್ನು ಭೇಟಿ ಮಾಡುವುದಿರಲಿ, ಬರೀ ಒಂದು ಸಲ ನೋಡುವುದಕ್ಕೇ ಹಾತೊರೆಯುವ ಅಸಂಖ್ಯ ಅಭಿಮಾನಿಗಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್‌ಸಿಬಿ ತಂಡಗಳ ನಡುವಿನ ಪಂದ್ಯ ವೀಕ್ಷಿಸಲು ಗೋವಾದಿಂದ ಅಭಿಮಾನಿಯೊಬ್ಬ ಬಂದಿದ್ದು, ತಾನು ಧೋನಿರನ್ನು ನೋಡಲೆಂದೇ ಅಷ್ಟು ದೂರದಿಂದ ಬಂದಿದ್ದಾಗಿ ಹೇಳಿಕೊಂಡಿದ್ದಾನೆ.
“ಧೋನಿಯನ್ನು ನೋಡಲು ಗೋವಾದಿಂದ ಬರಲು ನಾನು ನನ್ನ ಬೈಕ್ ಮಾರಾಟ ಮಾಡಿದೆ,” ಎಂಬ ಬ್ಯಾನರ್ ಹಿಡಿದು ಬಂದಿದ್ದ ಈತ ಪೆವಿಲಿಯನ್‌ನಲ್ಲಿ ಕುಳಿತಿದ್ದ ವೇಳೆ ಕ್ಯಾಮೆರಾ ಪ್ಯಾನ್ ಮಾಡಲಾಗಿದೆ. ಇದೀಗ ಈ ಅಭಿಮಾನಿಯ ಚಿತ್ರವು ಟ್ವಿಟರ್‌ನಲ್ಲಿ ವೈರಲ್ ಆಗಿದೆ.