Viral Video: ಅಬ್ಬರಿಸುತ್ತಿದ್ದ ಅಲೆಗಳ ಮುಂದೆಯೇ ನಿಂತ ಹಡಗು…! ಎದೆಯೊಡ್ಡಿ ನಿಂತ ನಾವಿಕ 12-03-2023 8:50AM IST / No Comments / Posted In: Latest News, Live News, International ಸಾಗರದ ದೈತ್ಯ ಅಲೆಗಳ ಆರ್ಭಟವನ್ನ ಯಾವತ್ತಾದ್ರೂ ನೋಡಿದ್ದಿರಾ? ಅಬ್ಬಬ್ಬಾ ಅಂದ್ರೆ ಸಿನೆಮಾಗಳಲ್ಲಿ ನೋಡಿರಬಹುದು ಅಷ್ಟೆ. ಆದೂ ಕೂಡ ಗ್ರಾಫಿಕ್ಸ್ ಎಫೆಕ್ಟ್. ಮಹಾಸಾಗರದ ನಟ್ಟ ನಡುವೆ ಏಳುವ ರಾಕ್ಷಸ ಅಲೆಗಳು ಎಷ್ಟು ಭಯಂಕರವಾಗಿರುತ್ತೆ ಅನ್ನೋದನ್ನ ನಾವ್ಯಾರೂ ಊಹಿಸುವುದಕ್ಕೂ ಆಗೋಲ್ಲ. ಈಗ ಅದೇ ರೀತಿಯ ಮಹಾಸಾಗರದ ಅಲೆಗಳ ನಡುವೆ ಹೋದ ಹಡಗೊಂದರ ವಿಡಿಯೋ ಈಗ ವೈರಲ್ ಆಗಿದೆ. ’ವೋವ್ ಟೆರಿಫೈಯಿಂಗ್’ ಅನ್ನೊ ಟ್ವಿಟ್ಟರ್ ಅಕೌಂಟ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಶೀರ್ಷಿಕೆಯಲ್ಲಿ; ನಾನು ಅಪಾಯದ ವಾಸನೆ ನೋಡುವ ಜೊತೆಗೆ ಉಪ್ಪಿನ ರುಚಿಯನ್ನೂ ಇಲ್ಲಿ ಕಂಡಿದ್ಧೇನೆ’ ಎಂದು ಬರೆಯಲಾಗಿದೆ. ಈಗಾಗಲೇ ಈ ವಿಡಿಯೋವನ್ನ 4.2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ಧಾರೆ. ಈ ವಿಡಿಯೋದಲ್ಲಿ ಎಲ್ಲರೂ ಗಮನಿಸುವ ಹಾಗೆ, ಹಡಗೊಂದು ಅಲೆಗಳ ಮುಂದೆ ಎದೆಯೊಡ್ಡಿಕೊಂಡು ಹೋಗುತ್ತಿರುತ್ತೆ. ಅದೇ ಹಡಗಿನ ತುದಿಯ ಡೆಕ್‌ನಲ್ಲಿ ನಾವಿಕ ಬಂದು ನಿಲ್ಲುತ್ತಾನೆ. ಆತನ ಕಣ್ಮುಂದೆಯೇ ದೈತ್ಯಾಕಾರದ ಅಲೆಗಳು ಹಡಗಿಗೆ ಬಂದು ಅಪ್ಪಳಿಸುತ್ತಿರುತ್ತೆ. ಅದನ್ನ ನೋಡಿದ ಆತನಿಗೆ ಮುಂದೆ ಅಪಾಯವಿದೆ ಅನ್ನೋದು ಅರಿವಾಗುತ್ತೆ. ಆದರೂ ಆತ ಅಲ್ಲೇ ನಿಂತಿರುತ್ತಾನೆ. ಅಷ್ಟರಲ್ಲಿ ಬಂದು ಹೊಡೆದ ಅಲೆಯೊಂದು ಹಡಗನ್ನ ಮುಳುಗಿಸಿಯೇ ಬಿಡುವಷ್ಟು ನೀರು ತುಂಬಿ ಬಿಡುತ್ತೆ. ಅದೇ ನೀರು ಆತನ ಬಾಯೊಳಗೂ ಹೋಗುತ್ತೆ. ಆದರೂ ಆತ ಹೆದರದೇ ಧೈರ್ಯದಿಂದ ಅಲ್ಲೇ ನಿಂತಿರುತ್ತಾನೆ. ಆತ್ಮವಿಶ್ವಾಸ-ಧೈರ್ಯ ಇವೆಲ್ಲ ಇದ್ದರೆ, ಅಲೆಗಳು ಯಾವ ಲೆಕ್ಕ ಅನ್ನುವುದು ಆತನ ಲೆಕ್ಕಾಚಾರ. ಇದೇ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ರೀತಿ ಅಲೆಗಳ ಮುಂದೆ ನಿಂತಿರುವುದು ಸಾವಿಗೆ ಆಹ್ವಾನ ಕೊಟ್ಟಂತೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ’ಇಂತಹ ಸಾಹಸ ಅಗತ್ಯವಿದೆಯಾ’ ಎಂದು ಬರೆದಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಅನಿಸಿಕೆಯನ್ನ ಬರೆದು ಪೋಸ್ಟ್ ಮಾಡಿದ್ದಾರೆ. I smell danger.. and salt water. pic.twitter.com/TVJgD38vOv — Wow Terrifying (@WowTerrifying) March 10, 2023