
ಈಕೆ 1970, ಜನವರಿ 19ರಂದು ರಾಹುಲ್ ಗಾಂಧಿ ಜನಿಸಿದ್ದ ಸಂದರ್ಭದಲ್ಲಿ ಅವರನ್ನು ನೋಡಿಕೊಂಡ ದಾದಿಯರಲ್ಲಿ ಒಬ್ಬರಾಗಿದ್ದಾರೆ. ರಾಹುಲ್ ಗಾಂಧಿ ಸಿಬ್ಬಂದಿ ಬಳಿ ಮಾತನಾಡಿದ ರಾಜಮ್ಮ ಈತ ನನ್ನ ಎದುರೇ ಜನಿಸಿದ್ದ. ನೀವೆಲ್ಲ ನೋಡೋದಕ್ಕೂ ಮುಂಚೆಯೇ ನಾನು ಇವರನ್ನ ನೋಡಿದ್ದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ರಾಹುಲ್ ಗಾಂಧಿಗೆ ದಾದಿ ರಾಜಮ್ಮ ಸಿಹಿ ತಿಂಡಿಯ ಪೊಟ್ಟಣವನ್ನು ನೀಡಿದ್ರು. ಅಲ್ಲದೇ ತಮ್ಮಿಂದ ಏನಾದರೂ ಅಡಚಣೆಯಾಗಿದ್ದರೆ ಕ್ಷಮಿಸಿ ಎಂದು ಹೇಳಿದ್ರು. ಈ ಮಾತಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಆ ರೀತಿಯ ಯಾವುದೇ ಸಮಸ್ಯೆ ಆಗಿಲ್ಲ ಎಂದು ಹೇಳಿದ್ರು.
ಈ ಅಮೂಲ್ಯ ಕ್ಷಣದ ವಿಡಿಯೋವನ್ನು ಕಾಂಗ್ರೆಸ್ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದೆ. ರಾಹುಲ್ ಗಾಂಧಿ ಜನಿಸಿದ್ದ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯ ದಾದಿಯಾಗಿದ್ದ ರಾಜಮ್ಮ ಅಮ್ಮ ಅವರ ಪ್ರೀತಿ ಎಂದು ಶೀರ್ಷಿಕೆ ನೀಡಲಾಗಿದೆ.
ನಿಮಗೆ ಸಿಹಿಯನ್ನು ನೀಡಲು ನನಗೆ ಯಾರೂ ಅನುಮತಿ ನೀಡಲಿಲ್ಲ. (ತಮ್ಮ ಮನೆಯತ್ತ ಕೈ ಮಾಡಿ ತೋರಿಸುತ್ತಾ) ನೋಡಿ, ಇದೇ ನಮ್ಮ ಮನೆ. ನಾವು ನಿಮ್ಮನ್ನು ಭೇಟಿಯಾಗಬೇಕೆಂದು ಬಯಸಿದ್ದೆ. ಎಲ್ಲಿ ನಿಮ್ಮ ಭದ್ರತಾ ಸಿಬ್ಬಂದಿ..? ಈತ ನನ್ನ ಮಗ ಅನ್ನೋದನ್ನ ನಾನು ಅವರಿಗೆ ತಿಳಿಸಬೇಕು ಎಂದು ವಿಡಿಯೋದಲ್ಲಿ ರಾಜಮ್ಮ ಹೇಳ್ತಿರೋದನ್ನ ಕೇಳಬಹುದಾಗಿದೆ.