ಒಲಿಂಪಿಕ್ ಪದಕ ಗೆಲ್ಲುವುದು ಬಹು ದೊಡ್ಡ ಸಾಧನೆ, ಆದರೆ ಇದರ ಬೆನ್ನ ಹಿಂದೆಯೇ ನಿಮ್ಮ ಮಾಜಿ ಪ್ರೇಯಸಿ ನಿಮ್ಮನ್ನು ಅರಸಿ ಬರುವುದೆಂದರೆ?
ನ್ಯೂಜಿಲೆಂಡ್‌ನ ಅಥ್ಲೀಟ್ ಹೇಡನ್ ವಿಲ್ಡೆ, ಟೋಕ್ಯೋ ಒಲಿಂಪಿಕ್ಸ್‌ನ ಪುರುಷರ ವೈಯಕ್ತಿಕ ಟ್ರಯಾಥ್ಲಾನ್‌ನಲ್ಲಿ ಕಂಚಿನ ಪದಕ ಗೆದ್ದು ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಹಾಗೆಯೇ ಇದೆ ಯಾವುದೇ ವಾರಸುದಾರರಿಲ್ಲದ ಬರೋಬ್ಬರಿ 50 ಸಾವಿರ ಕೋಟಿ ರೂ.
ಇದರ ಬೆನ್ನಿಗೇ ವಿಲ್ಡೆ ಅವರ ಹೈಸ್ಕೂಲ್ ಗರ್ಲ್‌ಫ್ರೆಂಡ್ ಆತನಿಗೆ ಕೈಕೊಟ್ಟ ತನ್ನ ನಿರ್ಣಯಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್‌ನ 1ನ್ಯೂಸ್ ಮಾಧ್ಯಮ ಹೇಡನ್‌ನ ಊರಾದ ವ್ಹಾಖಟಾನೆಯಲ್ಲಿ ಮೈಕ್ ಹಿಡಿದುಕೊಂಡು ಅಲ್ಲಿನ ಜನರನ್ನು ಹೇಡನ್ ಸಾಧನೆ ಬಗ್ಗೆ ಮಾತನಾಡಿಸುತ್ತಾ ಸಾಗಿದೆ.
ಈ ವೇಳೆ ಮಾತನಾಡಿದ ಆತನ ಮಾಜಿ ಪ್ರೇಯಸಿ, “ನಾನು ಆತನೊಂದಿಗೆ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದೆ. ಆತ ಎಷ್ಟು ಬೆಳೆದುಬಿಟ್ಟಿದ್ದಾನೆ, ನನಗೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ,” ಎಂದು ಆಕೆ, “ನಿನ್ನೊಂದಿಗೆ ಬ್ರೇಕಪ್ ಆಗಿದ್ದಕ್ಕೆ ನನಗೆ ವಿಷಾದವಿದೆ,” ಎಂದಿದ್ದಾರೆ.
ಸದ್ಯಕ್ಕೆ ಹೇಡನ್ ಬೇರೊಬ್ಬ ಮಹಿಳೆಯೊಂದಿಗೆ ಡೇಟಿಂಗ್ ಮಾಡುತ್ತಿರುವ ಕಾರಣ ಈಕೆ ಮತ್ತೆ ಆತನೊಂದಿಗೆ ಪ್ಯಾಚ್‌ಅಪ್ ಆಗುವ ಸಾಧ್ಯತೆಗಳು ಕಡಿಮೆ ಇವೆ.