ಐಸಿಸಿ ಟಿ 20 ವರ್ಲ್ಡ್ ಕಪ್ ಪಂದ್ಯಾವಳಿಯ ಬಳಿಕ ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನದಿಂದ ರವಿ ಶಾಸ್ತ್ರಿ ಕೂಡ ಕೆಳಗಿಳಿದಿದ್ದಾರೆ. ರವಿಶಾಸ್ತ್ರಿ ತಮ್ಮ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಾರೆ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ಅನೇಕರು ಟ್ರೋಲ್ಗಳ ಸುರಿಮಳೆಯನ್ನೇ ಹರಿಸುತ್ತಾ ಬಂದಿದ್ದಾರೆ.
ಪಂದ್ಯದ ವೇಳೆಯಲ್ಲಿ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತಿದ್ದ ರವಿ ಶಾಸ್ತ್ರಿ ಯಾವೆಲ್ಲ ರೀತಿಯಲ್ಲಿ ಮುಖಭಾವಗಳನ್ನು ಹೊರ ಹಾಕುತ್ತಾರೋ ಅವೆಲ್ಲವನ್ನೂ ಬಳಸಿ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಸಾಕಷ್ಟು ಮೀಮ್ಸ್ಗಳನ್ನು ಮಾಡಿ ರವಿ ಶಾಸ್ತ್ರಿಯ ಕಾಲು ಎಳೆಯುವ ಪ್ರಯತ್ನ ಬಹಳ ದಿನಗಳಿಂದ ನಡೆದುಕೊಂಡೇ ಬರ್ತಿದೆ.
ಖಾಸಗಿ ಶಾಲೆ ಮಕ್ಕಳ ಶುಲ್ಕ ಪಾವತಿಸಿದ್ದ ಪೋಷಕರಿಗೆ ಗುಡ್ ನ್ಯೂಸ್: ಹೆಚ್ಚುವರಿ ಶುಲ್ಕ ವಾಪಸ್ ನೀಡಲು ಆದೇಶ
ಈ ರೀತಿಯ ಟ್ರೋಲ್ಗಳು, ಮೀಮ್ಸ್ ನೋಡಿದ ರವಿ ಶಾಸ್ತ್ರಿ ಮನಸ್ಸಿಗೆ ಎಷ್ಟೊಂದು ಬೇಸರ ಮಾಡಿಕೊಂಡಿದ್ದಿರಬಹುದು ಎಂದು ನೀವು ಯೋಚಿಸಿದ್ದರೆ ಅದು ಸಂಪೂರ್ಣ ತಪ್ಪು..! ಏಕೆಂದರೆ ಸ್ವತಃ ರವಿಶಾಸ್ತ್ರಿಯೇ ಈ ಟ್ರೋಲ್ಗಳನ್ನು ನೋಡುತ್ತಾ ಎಂಜಾಯ್ ಮಾಡ್ತಿದ್ದಾರಂತೆ.
ಕೆಲವೊಂದು ಮೀಮ್ಸ್ನ್ನು ನಾನೂ ಎಂಜಾಯ್ ಮಾಡಿದ್ದೇನೆ. ಈ ರೀತಿ ಮೀಮ್ಸ್ ಮಾಡೋದಕ್ಕೂ ಪ್ರತಿಭೆಯ ಅಗತ್ಯವಿದೆ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
ʼಜನ್ ಧನ್ʼ ಖಾತೆ ಹೊಂದಿದವರು ಈಗ್ಲೇ ಮಾಡಿ ಈ ಕೆಲಸ..!
ನನ್ನನ್ನು ಗುರಿಯಾಗಿಟ್ಟುಕೊಂಡು ಮಾಡಿದ ಟ್ರೋಲ್ಗಳಿಂದ ಅನೇಕರ ಮುಖದಲ್ಲಿ ನಗು ಮೂಡಿದೆ. ಅಂಥಹ ಕಠಿಣ ಪರಿಸ್ಥಿತಿಯಲ್ಲಿಯೂ ನಿಮ್ಮ ಉತ್ತಮ ಹಾಸ್ಯದ ಪ್ರವೃತ್ತಿಯ ಮೂಲಕ ಜನರನ್ನು ನಗಿಸಿದ್ದೀರಾ. ಇವರಲ್ಲಿ ಕೆಲವರನ್ನು ನಾನು ಪಾರ್ಟಿಗೆ ಆಹ್ವಾನಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಒಂದೇ ಒಂದು ಐಸಿಸಿ ಟ್ರೋಫಿಯನ್ನು ಗೆಲ್ಲದೇ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದರೂ ಸಹ ರವಿ ಶಾಸ್ತ್ರಿ ತಮ್ಮ ಈ ಅಧಿಕಾರಾವಧಿಯು ನಿಜಕ್ಕೂ ಇನ್ನಿಲ್ಲದ ತೃಪ್ತಿ ನೀಡಿದೆ ಎಂದು ಹೇಳಿದ್ದಾರೆ. ಕೋವಿಡ್ ಕಾರಣದಿಂದ ಕಳೆದ ವರ್ಷ ಮಾತ್ರ ಪರಿಸ್ಥಿತಿ ತುಂಬಾ ಕಠಿಣ ಎನಿಸಿತ್ತು ಎಂದು ಇದೇ ವೇಳೆ ಹೇಳಿದ್ರು.