
ಅವೆರಿ ಹೆಸರಿನ ಈ ಪುಟಾಣಿ ಬಾಲಕಿರಯನ್ನು ಅಪ್ಪಿಕೊಂಡ ಬಿಡೆನ್, “ನಿನ್ನಲ್ಲಿ ದೃಢ ಮನಸ್ಸಿದ್ದಲ್ಲಿ ಅದು ನಿನ್ನನ್ನು ಬಿಟ್ಟು ಹೋಗಲಿದೆ ಎಂದು ನಾನು ಮಾತು ಕೊಡುವೆ, ಓಕೆ?” ಎಂದು ತಿಳಿಸಿದ್ದಾರೆ. ಅಧ್ಯಕ್ಷರಿಂದಲೇ ಕೇಳಿ ಬಂದ ಈ ಮಾತುಗಳು ಬಾಲಕಿಯ ವಿಶ್ವಾಸವನ್ನು ಇಮ್ಮಡಿಗೊಳಿಸಿವೆ.
ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ 10 ವರ್ಷದ ಹಿಂದೆ ಮಾಡಿದ್ದ ಟ್ವೀಟ್ ವೈರಲ್..!
ಶ್ವೇತಭವನಕ್ಕೆ ಬಾಲಕಿಯನ್ನು ಆಹ್ವಾನಿಸಿದ ಬಿಡೆನ್, “ನೀನು ಹೀಗೆ ಮಾಡಬಲ್ಲೆಯೋ ನನಗೆ ಗೊತ್ತಿಲ್ಲ. ಬಹುಶಃ ನೀನು ಶ್ವೇತಭವನಕ್ಕೆ ಒಮ್ಮೆ ಬರಬಹುದು,” ಎಂದಿದ್ದಾರೆ.
ಅಮೆರಿಕದ ರಾಯಭಾರಿಯಾಗಿ 2013ರಿಂದ 2017ರವರೆಗೆ ಕೆಲಸ ಮಾಡಿ, ಇದೀಗ ಅಧ್ಯಕ್ಷರ ಭದ್ರತಾ ಕರ್ತವ್ಯದಲ್ಲಿರುವ ರಫಸ್ ಗಿಫ್ಫೋರ್ಡ್ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅವೆರಿ ಇದೇ ಗಿಫ್ಫೋರ್ಡ್‌ರ ಸಹೋದರ ಸಂಬಂಧಿಯಾಗಿದ್ದಾಳೆ.