ಮೀರತ್: ಶಿಕ್ಷಕಿಯ ಜೊತೆಯೇ ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿರುವ ಆಘಾತಕಾರಿ ಘಟನೆಯೊಂದು ಉತ್ತರಪ್ರದೇಶದ ಮೀರತ್ನಲ್ಲಿ ನಡೆದಿದೆ. ತಮಗೆ ಪಾಠ ಮಾಡಿದ ಶಿಕ್ಷಕಿಯ ಜೊತೆಯೇ ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿದ್ದಾರೆ.
ಮೀರತ್ನ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಾಮ್ ಮನೋಹರ್ ಲೋಹಿಯಾ ಇಂಟರ್ ಕಾಲೇಜು ಆವರಣದಲ್ಲಿ ಈ ಘಟನೆ ನಡೆದಿದೆ. 12ನೇ ತರಗತಿಯಲ್ಲಿ ಓದುತ್ತಿರುವ ಅಮನ್, ಕೈಫ್ ಹಾಗೂ ಅಮಲ್ತಾಸ್ ಎಂಬ ವಿದ್ಯಾರ್ಥಿಗಳು ಇಂಥದ್ದೊಂದು ಕುಕೃತ್ಯ ಎಸಗಿದ್ದಾರೆ. ಶಿಕ್ಷಕಿಗೆ ಅಸಭ್ಯವಾಗಿ ಕಾಮೆಂಟ್ಗಳನ್ನು ಮಾಡಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಆ ದೃಶ್ಯದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇಷ್ಟೇ ಅಲ್ಲದೇ, ಪಾಠ ಮಾಡುತ್ತಿರುವಾಗಲೇ ಐ ಲವ್ ಯೂ ಮೇರಿ ಜಾನಮ್ ಎಂದು ಹೇಳಿ ಶಿಕ್ಷಕಿಗೆ ಕಿರುಕುಳ ನೀಡಿದ್ದಾರೆ. ಬಾಯಲ್ಲಿ ಲಾಲಿಪಾಪ್ ಇಟ್ಟುಕೊಂಡು ಅಶ್ಲೀಲವಾಗಿ ವರ್ತಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಶಿಕ್ಷಕಿ ಕೂಡ ಮುಸ್ಲಿಂ ಆಗಿದ್ದು, ವಿದ್ಯಾರ್ಥಿಗಳ ಕಾಟದಿಂದಾಗಿ ಹಿಜಾಬ್ ಧರಿಸಿ ಬರುತ್ತಿದ್ದರು ಎನ್ನಲಾಗಿದೆ. ಆದರೆ ಈ ವಿದ್ಯಾರ್ಥಿಗಳು ಅಸಭ್ಯವಾಗಿ ನಡೆದುಕೊಂಡಿದ್ದಾರೆ.