ಕ್ಯಾನ್‌ಬೆರಾ: ಪುನರ್ಜನ್ಮದ ಪರಿಕಲ್ಪನೆಗಳನ್ನು ನೀವು ಕೇಳಿರಬಹುದು. ವ್ಯಕ್ತಿಯೊಬ್ಬರು ಸತ್ತು, ಅದೇ ಕುಟುಂಬದಲ್ಲಿ ಮರುಜನ್ಮ ಪಡೆದು ಹಳೆಯ ಘಟನೆಗಳನ್ನು ನೆನಪಿಸಿಕೊಂಡ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಆದರೆ, ಗರ್ಭಪಾತವಾಗಿದ್ದ ಭ್ರೂಣವೊಂದು ಮತ್ತೆ ತನ್ನ ತಾಯಿಯ ಹೊಟ್ಟೆಯಲ್ಲಿ ಮರುಹುಟ್ಟು ಪಡೆದು ಆ ಘಟನೆಯನ್ನು ನೆನಪಿಸಿಕೊಂಡ ವಿಲಕ್ಷಣ ಘಟನೆಯೊಂದು ನಡೆದಿದೆ.
ಆಸ್ಟ್ರೇಲಿಯಾದ ತಾಯಿಯೊಬ್ಬರು ತನ್ನ ನಾಲ್ಕು ವರ್ಷದ ಮಗ ತನ್ನ ಗರ್ಭಪಾತವನ್ನು ನೆನಪಿಸಿಕೊಂಡಿರುವ ವಿಲಕ್ಷಣ ಕ್ಷಣವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವನು ಸತ್ತು ವರ್ಷಗಳ ನಂತರ ಹಿಂತಿರುಗಿದ ಘಟನೆ ಇದು. ಲಾರಾ ಮಜ್ಜಾ ಅವರು ತಮ್ಮ ಮಗನೊಂದಿಗೆ ನಡೆಸಿದ ಸಂಭಾಷಣೆಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಬಾಲಕ ಹೇಳಿದ್ದೇನು?
ಲಾರಾ ತನ್ನ ಮಗ ಲುಕಾ ತನ್ನ ತಾಯಿಯ ಗರ್ಭಪಾತವನ್ನು ನೆನಪಿಸಿಕೊಳ್ಳುತ್ತಾನೆ ಎಂದು ಹೇಳಿಕೊಂಡಿದ್ದಾಳೆ. ಸಕಾರಾತ್ಮಕ ಗರ್ಭಧಾರಣೆಯ ಪರೀಕ್ಷೆಯನ್ನು ಪಡೆದ ಕೆಲವು ದಿನಗಳ ನಂತರ, ಲಾರಾ ತೀವ್ರವಾದ ನೋವನ್ನು ಅನುಭವಿಸಿದಳು. ಅಲ್ಲದೆ ಅವಳಿಗೆ ಗರ್ಭಪಾತವಾಯಿತು. ವರ್ಷಗಳ ನಂತರ ಮತ್ತೆ ಗರ್ಭ ಧರಿಸಿದ ಆಕೆ ಗಂಡು ಮಗುವಿಗೆ ಜನ್ಮವಿತ್ತಳು.
ಒಂದು ರಾತ್ರಿ ಮಗನಿಗೆ ಸ್ನಾನ ಮಾಡುತ್ತಿರುವಾಗ ಬಾಲಕ ತನ್ನ ತಾಯಿಗೆ ಆಘಾತವನ್ನುಂಟುಮಾಡುವ ಸಂಗತಿಯನ್ನು ಹೇಳಿದ್ದಾನೆ. ತಾಯಿ ಬಳಿ, ನಾವು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತೇವೆಯೇ? ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ತಾಯಿ ಹೌದೆಂದು ಉತ್ತರಿಸಿದ್ದಾಳೆ. ಅದಕ್ಕೆ ಬಾಲಕ ನಾನು ನಿಮ್ಮ ಹೊಟ್ಟೆಯಲ್ಲಿ ವಾಸಿಸುತ್ತಿದ್ದೆ. ಆದರೆ, ಬಳಿಕ ನಾನು ಮೃತಪಟ್ಟೆ ಎಂದು ಹೇಳಿದ್ದಾನೆ.
ತಾಯಿಗೆ ತನ್ನ ಮಗ ಏನು ಹೇಳುತ್ತಿದ್ದಾನೆಂದು ಅರ್ಥವಾಗಲಿಲ್ಲ. ಮತ್ತೆ ಬಿಡಿಸಿ ಕೇಳಿದ್ದಾಳೆ. ನಾನು ನಿಮ್ಮ ಹೊಟ್ಟೆಗೆ ಬಂದೆ. ನಂತರ ನಾನು ಮೃತಪಟ್ಟೆ. ನಿನ್ನನ್ನು ಹುಡುಕುತ್ತಾ ನಿಮ್ಮ ಮನೆಗೆ ಹೋದೆ. ನಾನು ಎಲ್ಲಾ ಕಡೆ ಹೋದೆ. ಆದರೆ, ನಾನು ನಿಮನ್ನು ಮಾತನಾಡಿಸಿದಾಗ ನನ್ನ ಮಾತು ನಿಮಗೆ ಕೇಳಲಿಲ್ಲ. ಆದ್ದರಿಂದ ನಾನು ದುಃಖಿತನಾಗಿದ್ದೆ. ಆದರೆ, ನಾನು ದೇವತೆಯಾದೆ. ನಾನು ನಿನ್ನನ್ನು ಕಳೆದುಕೊಂಡೆ. ನಿಮ್ಮ ಬಳಿಗೆ ಮರಳಲು ಬಯಸಿದ್ದರಿಂದ ಮತ್ತೆ ನಿಮ್ಮ ಹೊಟ್ಟೆಯಲ್ಲಿ ಮಗುವಾಗಿ ಜನಿಸಿದೆ ಎಂದು ಹೇಳಿದ್ದಾನೆ. ಇದನ್ನು ಕೇಳಿದ ತಾಯಿ ಕಣ್ಣೀರಧಾರೆ ಹರಿಸಿದ್ಲು. ಅಲ್ಲದೆ, ಪುನರ್ಜನ್ಮ ಎನ್ನುವುದು ಆಕೆಯನ್ನು ನಂಬುವಂತೆ ಮಾಡಿದೆ.