ಬಾಲಿವುಡ್ ನಟಿ ಕಂಗನಾ ರಣಾವತ್ ತಲೈವಿ ಸಿನಿಮಾದ ನಟನೆಗಾಗಿ ಸಾಕಷ್ಟು ಪ್ರಶಂಸೆ ಗಳಿಸುತ್ತಿದ್ದಾರೆ. ತಮಿಳುನಾಡು ಸಿಎಂ ಹಾಗೂ ಮಾಜಿ ನಟಿ ದಿವಂಗತ ಜಯಲಲಿತಾ ಅವರ ಜೀವನ ಆಧಾರಿತ ಸಿನಿಮಾದಲ್ಲಿ ನಟಿ ಕಂಗನಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.
ಈ ಸಿನಿಮಾದಲ್ಲಿ ಜಯಲಲಿತಾರಂತೆ ಕಾಣುವ ಸಲುವಾಗಿ ನಟಿ ಕಂಗನಾ ತೂಕದಲ್ಲಿ ಸಾಕಷ್ಟು ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗಿ ಬಂದಿತ್ತು. ಈ ಸಿನಿಮಾದಿಂದಾಗಿ ನನ್ನ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಿದೆ ಎಂದು ನಟಿ ಕಂಗನಾ ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.
ಸಿನಿಮಾದ ಬಗೆಗಿನ ತಮ್ಮ ಅನುಭವವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಕಂಗನಾ, ಆರು ತಿಂಗಳ ಅವಧಿಯಲ್ಲಿ ತೂಕ ಹೊಂದಾಣಿಕೆಯಿಂದಾಗಿ ನನ್ನ ದೇಹದಲ್ಲಿ ಈಗ ಶಾಶ್ವತ ಸ್ಟ್ರೆಚ್ ಮಾರ್ಕ್ಗಳು ಉಳಿದುಕೊಂಡಿವೆ ಎಂದು ಹೇಳಿದ್ದಾರೆ. ಸಿನಿಮಾದಲ್ಲಿ ತಮ್ಮ ಎರಡು ಅವತಾರಗಳ ಫೋಟೋವನ್ನು ಈ ಪೋಸ್ಟ್ನ ಜೊತೆ ಶೇರ್ ಮಾಡಿದ್ದಾರೆ.
ನನ್ನ ಮೂವತ್ತರ ವಯಸ್ಸಿನಲ್ಲಿ ಕೇವಲ ಆರು ತಿಂಗಳ ಅವಧಿಯಲ್ಲಿ 20 ಕೆಜಿ ಏರಿಸಿಕೊಳ್ಳುವುದು ಹಾಗೂ ಇಳಿಸಿಕೊಳ್ಳುವುದು ನನ್ನ ದೇಹದ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮವನ್ನು ಬೀರಿದೆ. ಇದರಿಂದ ನನ್ನ ದೇಹದಲ್ಲಿ ಶಾಶ್ವತ ಸ್ಟ್ರೆಚ್ ಮಾರ್ಕ್ಗಳನ್ನು ಉಂಟು ಮಾಡಿದೆ. ಆದರೆ ಕಲೆಯು ಒಂದು ಬೆಲೆಯ ಜೊತೆಗೆ ಜೀವನದಲ್ಲಿ ಬರುತ್ತದೆ. ಕಲಾವಿದರು ಸ್ವತಃ ಒಬ್ಬ ತಲೈವಿ ಆಗಿದ್ದಾರೆ ಎಂದು ಈ ಫೋಟೋಗಳಿಗೆ ಶೀರ್ಷಿಕೆ ನೀಡಿದ್ದಾರೆ.
ಕಂಗನಾರ ಈ ಪೋಸ್ಟ್ಗೆ ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿ ಬಂದಿದೆ. ಅನೇಕರು ಕಂಗನಾರ ಈ ಪ್ರಯತ್ನಕ್ಕೆ ಶಹಬ್ಬಾಸ್ ಎಂದಿದ್ದಾರೆ.
https://www.instagram.com/p/CURvZ-3sflG/?utm_source=ig_web_copy_link