ಬೆಂಗಳೂರು : ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಕ್ಕೆ ದಂಡ ಕಟ್ಟಿದ್ದೇನೆ ‘ಕರೆಂಟ್ ಕಳ್ಳ’ ಎಂದು ಕರೆಯೋದು ನಿಲ್ಲಿಸಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ನಾನು ಮಾಡಿದಂತ ತಪ್ಪಿಗಾಗಿ ಬೆಸ್ಕಾಂ ರೂ.68,526 ದಂಡವನ್ನು ವಿಧಿಸಿದೆ. ಅದನ್ನು ಕಟ್ಟಿದ್ದೇನೆ..! ಅದೇನೋ ಕರೀತಿರಲ್ಲಾ ‘ಕರೆಂಟ್ ಕಳ್ಳ’ ಎಂದು..ಅದನ್ನು ಕರೆಯೋದು ನಿಲ್ಲಿಸಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಅಕ್ರಮ ವಿದ್ಯುತ್ ಸಂಪರ್ಕದ ಬಗ್ಗೆ ತಪ್ಪಿನ ಅರಿವಾದ ಕೂಡಲೇ ವಿಷಾದ ವ್ಯಕ್ತ ಪಡಿಸಿದ್ದೇನೆ. ಬೆಸ್ಕಾಂ ಅಧಿಕಾರಿಗಳು ವಿಧಿಸಿದ ದಂಡವನ್ನು ಪಾವತಿ ಮಾಡಿದ್ದೇನೆ ಎಂದರು.
ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಮಾಜಿ ಸಿಎಂ ಕುಮಾರಸ್ವಾಮಿಗೆ 68,526 ರೂ. ದಂಡ ವಿಧಿಸಲಾಗಿದೆ.
ದೀಪಾವಳಿ ಹಬ್ಬಕ್ಕೆ ಮನೆ ಅಲಂಕಾರಕ್ಕೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಹೆಚ್ಡಿಕೆ ನಡೆಗೆ ವಿಪಕ್ಷಗಳು ಟೀಕಾ ಪ್ರಹಾರ ನಡೆಸಿದ್ದವು.