ಕೊಪ್ಪಳ : ನಾನು ಹುಟ್ಟಿ ಬೆಳೆದಾಗಿನಿಂದ ಇಂತಹ ಭೀಕರ ಬರಗಾಲ ನೋಡಿಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಈ ಸರ್ಕಾರದ ಒಬ್ಪ ಮಂತ್ರಿಯೂ ರೈತರ ಗೋಳು ಕೇಳಿಲ್ಲ, ಎಲ್ಲಿಯೂ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಸಿಎಂ, ಡಿಸಿಎಂ, ಉಸ್ತುವಾರಿ ಸಚಿವರು ಎಲ್ಲಾ ಕೆಲಸ ನಿಲ್ಲಿಸಬೇಕು.
ಸಿದ್ದರಾಮಯ್ಯ ಲೂಟಿಕೋರ, ಅವರನ್ನು ನನಗೆ ಹೋಲಿಸಬೇಡಿ, ಸಿದ್ದರಾಮಯ್ಯ ಮಂಗ ಹಾರಿದಂತೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ಧಾಳಿ ನಡೆಸಿದರು.