alex Certify ’ನನಗೆ ನನ್ನ ಬದುಕಿನ ಮೇಲೇ ದ್ವೇಷ ಹುಟ್ಟುತ್ತಿದೆ’: ಡೆಲಿವರಿ ಏಜೆಂಟ್‌ ವ್ಯಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ನನಗೆ ನನ್ನ ಬದುಕಿನ ಮೇಲೇ ದ್ವೇಷ ಹುಟ್ಟುತ್ತಿದೆ’: ಡೆಲಿವರಿ ಏಜೆಂಟ್‌ ವ್ಯಥೆ

ಫುಡ್ ಡೆಲಿವರಿ ಕೆಲಸ ಅದೆಷ್ಟು ಆಯಾಸ ತರುವಂಥದ್ದು ಎಂದು ಸಾಬೀತು ಪಡಿಸುವ ಅನೇಕ ನಿದರ್ಶನಗಳನ್ನು ನಾವೀಗಾಗಲೇ ಕಂಡಿದ್ದೇವೆ. ಊಬರ್‌ ಈಟ್ಸ್‌‌ನ ಡೆಲಿವರಿ ಏಜೆಂಟ್ ಒಬ್ಬರ ಈ ಸಂದೇಶ ನೆಟ್ಟಿಗರ ಹೃದಯಗಳನ್ನು ಕರಗಿಸುತ್ತಿದೆ.

ಊಬರ್‌ ಈಟ್ಸ್‌ ಏಜೆಂಟ್‌ ಒಬ್ಬರೊಂದಿಗೆ ತಾವು ನಡೆಸಿದ ಸಂವಹನದಲ್ಲಿ ಆತ ತನ್ನ ಕೆಲಸದ ಕುರಿತು ಹೇಗೆ ಹೇಳಿಕೊಂಡಿದ್ದಾನೆ ಎಂದು ಟ್ವಿಟರ್‌ ಬಳಕೆಗಾರ್ತಿಯೊಬ್ಬರು ಟ್ವೀಟ್ ಮೂಲಕ ಶೇರ್‌ ಮಾಡಿಕೊಂಡಿದ್ದಾರೆ.

“ಓ ಮೈ ಗಾಡ್‌, ನನ್ನ ಊಬರ್‌ ಈಟ್ಸ್‌ ಏಜೆಂಟ್ ಇದನ್ನೆಲ್ಲಾ ಅನುಭವಿಸುತ್ತಿದ್ದಾರೆ,” ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ. ಇದರ ಕೆಳಗೆ, ಸಿಲ್ವಾನೋ ಹೆಸರಿನ ಊಬರ್‌ ಈಟ್ಸ್‌ ಏಜೆಂಟ್ ಒಂದರ ಹಿಂದೆ ಒಂದು ಸಂದೇಶಗಳನ್ನು ಕಳುಹಿಸುತ್ತಿರುವುದನ್ನು ಸಹ ಶೇರ್‌ ಮಾಡಿ, “ನನ್ನ ಕರುಣಾಮಯಿ ಸ್ವಭಾವವನ್ನು ನನ್ನ ದೌರ್ಬಲ್ಯ ಎಂದು ಜನರ ಏಕೆ ಭಾವಿಸುತ್ತಾರೆ ಎಂದು ನನಗೆ ತಿಳಿಯುತ್ತಿಲ್ಲ,” ಎಂದು ಆತ ಹೇಳಿರುವುದನ್ನು ಪೋಸ್ಟ್‌ ಮಾಡಿದ್ದಾರೆ.

“ನನ್ನ ಜೀವನವನ್ನು ನಾನು ದ್ವೇಷಿಸುತ್ತೇನೆ,” ಎಂದು ಸಂದೇಶದಲ್ಲಿ ಕಳುಹಿಸಿರುವ ಆತ ಕೊನೆಗೆ, “ನಾನು ಕಾಯುತ್ತೇನೆ,” ಎಂದಿದ್ದಾರೆ.

ತನಗೆ ಫುಡ್ ಡೆಲಿವರಿ ಮಾಡಲು ಬಂದಾತನನ್ನು ವಾಚ್‌ಮನ್ ಒಳಗೆ ಬಿಡದೇ ಇದ್ದ ಕಾರಣದಿಂದ, ಆತ ಡೋರ್‌ಬೆಲ್‌ಗೆ ಕನೆಕ್ಟ್ ಆಗಿದ್ದ ಫೋನ್‌ಗೆ ಕರೆ ಮಾಡಿದಾಗಲೂ ಸಹ ಅದೂ ಕೆಲಸ ಮಾಡುತ್ತಿರಲಿಲ್ಲ ಎಂದಿರುವ ಈ ಮಹಿಳೆ, ಕೊನೆಗೂ, 10 ನಿಮಿಷಗಳ ಕಾಯುವಿಕೆ ಬಳಿಕ, ಆತ ತನಗೆ ಆರ್ಡರ್‌ ಮಾಡಿದ್ದ ಆಹಾರವನ್ನು ಕೊಟ್ಟ ಎಂದ ಈಕೆ, ಅದಕ್ಕೆ ಪ್ರತಿಯಾಗಿ ಒಂದೊಳ್ಳೆ ಟಿಪ್ ಕೊಟ್ಟಿದ್ದಾಗಿ ತಿಳಿಸಿದ್ದಾರೆ.

ಡೆಲಿವರಿ ಏಜೆಂಟ್‌ಗಳ ದಿನನಿತ್ಯದ ಕೆಲಸ ಅದೆಷ್ಟು ಸವಾಲಿನದ್ದಾಗಿದೆ ಎಂಬ ವಿಚಾರವಾಗಿ ಈ ಪೋಸ್ಟ್ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದ್ದು, ಈ ಏಜೆಂಟ್‌ಗಳ ಬಗ್ಗೆ ಅನೇಕ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...