ಬೆಂಗಳೂರು: ಎತ್ತಿನಹೊಳೆ ಯೋಜನೆ ಮುಗಿಸಲು ಸಾಧ್ಯವೇ ಇಲ್ಲ. ಒಂದು ವೇಳೆ ಸರ್ಕಾರ ಈ ಯೋಜನೆ ಪುರ್ಣಗೊಳಿಸಿದರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಪರಿಷತ್ ಜೆಡಿಎಸ್ ಸದಸ್ಯ ಬೋಜೇಗೌಡ ಸವಾಲು ಹಾಕಿದ್ದಾರೆ.
ವಿಧಾನಪರಿಷತ್ ನಲ್ಲಿ ನೀರಾವರಿ ಯೋಜನೆಗಳ ಕುರಿತು ನಡೆದ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ಅವರು, 22 ಕೋಟಿ ಖರ್ಚಾದರೂ ಎತ್ತಿನಹೊಳೆ ಯೋಜನೆ ಮುಗಿಸಲು ಆಗಲ್ಲ. 50 ಸಾವಿರ ಕೋಟಿ ಖರ್ಚು ಮಾಡಿದರೂ ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲು ಸಾಧ್ಯವಿಲ್ಲ. ಹಾಗೊಂದು ವೇಳೆ ಯೋಜನೆ ಪೂರ್ಣಗೊಂಡರೆ ನಾನು ನೇಣುಹಾಕಿಕೊಳ್ಳುತ್ತೇನೆ ಎಂದರು.
ಎಣ್ಣೆ ಹೊಡೆಯೋದಕ್ಕೆ ಕಳ್ಳತನ; ಪಿಜಿ ಗಳಿಗೆ ನುಗ್ಗಿ ರಾಬರಿ ಮಾಡ್ತಿದ್ದವನ ಬಂಧನ
ಎತ್ತಿನಹೊಳೆ ಯೋಜನೆ ಕೆಲವರ ಪಾಲಿಗೆ ಕಾಮಧೇನುವಾಗಿದೆ. ಯಾರ್ಯಾರು ಇದನ್ನು ಕಾಮಧೇನು ಮಾಡಿಕೊಂಡಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಷ್ಟು ಸುಲಭವಾಗಿ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.