ಬೆಂಗಳೂರು : ನೀವೆಲ್ಲೇ ಹೋದ್ರೂ ನಿಮ್ಮ ಪಕ್ಕದಲ್ಲಿ ನೆರಳು ಹಿಂಬಾಲಿಸುತ್ತದೆ ಅಲ್ಲವೇ? ಆಗಸ್ಟ್ 18 ರ ಇಂದು ನಡೆಯಲಿರುವ ಆಸಕ್ತಿದಾಯಕ ವಿದ್ಯಮಾನದಲ್ಲಿ ನಿಮ್ಮ ನೆರಳು ನಿಕಟವಾಗಿ ಕಣ್ಮರೆಯಾಗುತ್ತದೆ. ಈ ಖಗೋಳ ಘಟನೆಯನ್ನು ಶೂನ್ಯ ನೆರಳು ದಿನ ಎಂದು ಕರೆಯಲಾಗುತ್ತದೆ. ಅಲ್ಲದೆ, ಶುಕ್ರವಾರದ ಘಟನೆಗೆ ಪ್ರತಿ ನಗರ ಅಥವಾ ಇಡೀ ಜಗತ್ತು ಸಾಕ್ಷಿಯಾಗುವುದಿಲ್ಲ. ಆದರೆ, ಬೆಂಗಳೂರು ಇದಕ್ಕೆ ಎರಡನೇ ಬಾರಿಗೆ ಸಾಕ್ಷಿಯಾಗಲಿದೆ.
ಶೂನ್ಯ ನೆರಳು ದಿನ ಎಂದರೇನು ?
ಶೂನ್ಯ ನೆರಳಿನ ದಿನದಂದು ಸೂರ್ಯ ನೇರವಾಗಿ ನಮ್ಮ ತಲೆಯ ಮೇಲೆ ಇರುತ್ತಾನೆ. ಈ ಸಮಯದಲ್ಲಿ ಭೂಮಿಯ ಮೇಲ್ಮೈಯಲ್ಲಿ ಯಾವುದೇ ನೆರಳು ಕಾಣಿಸದು. ಸೂರ್ಯನು ಆಕಾಶದಲ್ಲಿ ತನ್ನ ಅತ್ಯಧಿಕ ಎತ್ತರಕ್ಕೆ ತಲುಪುವಾಗ ಮತ್ತು ನಮ್ಮ ಮೇಲೆ ನೇರವಾಗಿ ಇರುವಾಗ ಈ ವಿದ್ಯಮಾನ ಸಂಭವಿಸುತ್ತದೆ. ದಕ್ಷಿಣಾಯನ ಹಾಗೂ ಉತ್ತರಾಯಣದಲ್ಲಿ ತಲಾ 1 ಬಾರಿ ಶೂನ್ಯ ನೆರಳಿನ ದಿನ ಬರುತ್ತದೆ.
ಇದು ಯಾವಾಗ ಸಂಭವಿಸುತ್ತದೆ ?
ಇಂದು, ಈ ಖಗೋಳ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಮಧ್ಯಾಹ್ನದ ಸಮಯದಲ್ಲಿ ಆಚೆ ಬನ್ನಿ. ಇದನ್ನು ಸೆರೆಹಿಡಿಯಲು ಮತ್ತು ವೀಕ್ಷಿಸಲು ನಿಖರವಾದ ಸಮಯ ಮಧ್ಯಾಹ್ನ 12.17 ಎಂದು ಹೇಳಲಾಗುತ್ತಿದೆ.
ಹಾಗಂತ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ಶೂನ್ಯ ನೆರಳಿನ ದಿನ ಸಂಭವಿಸುತ್ತಿರುವುದ್ದಲ್ಲ. ಈ ವರ್ಷದ ಆರಂಭದಲ್ಲಿ ಏಪ್ರಿಲ್‌ನಲ್ಲಿ ಬೆಂಗಳೂರು ಶೂನ್ಯ ನೆರಳು ದಿನವನ್ನು ಆಚರಿಸಿತು. ಆಗಸ್ಟ್ 3 ರಂದು, ಹೈದರಾಬಾದ್ ನಲ್ಲಿ ಈ ವಿಸ್ಮಯ ಸಂಭವಿಸಿದೆ. ಮಧ್ಯಾಹ್ನ 12.23ರ ಸುಮಾರಿಗೆ ಸೂರ್ಯನು ನಿಖರವಾಗಿ ಮೇಲಿರುವಾಗ, ನೆರಳುಗಳು ನೆಲದ ಮೇಲೆ ಬೀಳಲಿಲ್ಲ.