ಕಳೆದ ಗುರುವಾರ, ತಮಿಳು ನಟ ಮತ್ತು ಸಂಗೀತ ಸಂಯೋಜಕ ವಿಜಯ್ ಆಂಟನಿಯ 16 ವರ್ಷದ ಮಗಳು ಮೀರಾ ಆತ್ಮಹತ್ಯೆ ಮಾಡಿಕೊಂಡರು. ಈ ನೋವಿನಲ್ಲಿರುವ ನಟ ವಿಜಯ್ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ತಮ್ಮ ಮಗಳ ಅಂತಿಮ ವಿಧಿಗಳನ್ನು ನೆರವೇರಿಸಿದ ಒಂದು ದಿನದ ನಂತರ, ವಿಜಯ್ ತಮ್ಮ ಭಾವುಕ ಹೇಳಿಕೆಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.‘ನಿಮ್ಮೆಲ್ಲರಿಗೂ ನಮಸ್ಕಾರ, ನನ್ನ ಮಗಳು ಮೀರಾ ತುಂಬಾ ಮತ್ತು ಧೈರ್ಯಶಾಲಿ. ಅವಳು ಈಗ ಜಾತಿ, ಧರ್ಮ, ಹಣ, ಅಸೂಯೆ, ನೋವು, ಬಡತನ ಮತ್ತು ಪ್ರತೀಕಾರದಿಂದ ಮುಕ್ತವಾದ ಉತ್ತಮ ಮತ್ತು ಶಾಂತಿಯುತ ಸ್ಥಳಕ್ಕೆ ಹೋಗಿದ್ದಾಳೆ. ಅವಳು ಇನ್ನೂ ನನ್ನೊಂದಿಗೆ ಮಾತನಾಡುತ್ತಿದ್ದಾಳೆ. ನಾನು ಕೂಡ ಅವಳೊಂದಿಗೆ ಸತ್ತೆ. ನಾನು ಈಗ ನನ್ನ ಮಗಳೊಂದಿಗೆ ಸಮಯ ಕಳೆಯಲು ಪ್ರಾರಂಭಿಸಿದ್ದೇನೆ. ಇಂದಿನಿಂದ, ಅವಳ ಪರವಾಗಿ ನಾನು ಯಾವುದೇ ಒಳ್ಳೆಯ ಕೆಲಸವನ್ನು ಮಾಡಿದರೂ ಅವಳು ಜೊತೆಗೆ ಇರುತ್ತಾಳೆ ಎಂದು ಬರೆದುಕೊಂಡಿದ್ದಾರೆ.
![](https://kannadadunia.com/wp-content/uploads/2023/09/Actor-Vijay-Antonys-daughter-suicide.png)
ವಿಜಯ್ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ
ವಿಜಯ್ ಆಂಟನಿ ಅವರ ಮಗಳು ಸೆಪ್ಟೆಂಬರ್ 19 ರಂದು ಮುಂಜಾನೆ 3 ಗಂಟೆ ಸುಮಾರಿಗೆ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಕೂಡಲೇ ಅವಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು ಕೂಡ ಆಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ಮೀರಾ ಚೆನ್ನೈನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದು, ಸಾಂಸ್ಕ್ರತಿಕ ಚಟುವಟಿಕೆಯಲ್ಲಿಕೂಡ ಮುಂದೆ ಇದ್ದಳು. ಮೀರಾ ಅವರ ಹಠಾತ್ ಸಾವು ಪೋಷಕರು ಹಾಗೂ ಸಂಬಂಧಿಕರಿಗೆ ಆಘಾತವನ್ನುಂಟು ಮಾಡಿದೆ. ಮತ್ತು ತಮಿಳು ಚಲನಚಿತ್ರೋದ್ಯಮದ ಅನೇಕರು ವಿಜಯ್ ಮತ್ತು ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.