ಮದುವೆ ಅನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಒಂದು ಪ್ರಮುಖ ಕ್ಷಣ. ಅದರಲ್ಲೂ ಹೆಣ್ಣುಮಕ್ಕಳಿಗೆ ಮದುವೆ ದಿನ ಯಾವ ತರಹದ್ದು ಬಟ್ಟೆ ತೊಡುವುದು, ಸಿಂಗಾರ ಮಾಡಿಕೊಳ್ಳುವ ಬಗ್ಗೆ ತುಸು ಹೆಚ್ಚೇ ಆಸಕ್ತಿ.
ಅಂತೆಯೇ ಇಲ್ಲೊಬ್ಬರು ವೃದ್ಧೆ ತಾನು ಮದುವೆಯಾದಾಗ ಬಿಳಿ ಗೌನ್ ತೊಡಲು ಆಸೆ ಪಟ್ಟಿದ್ದರು. ಆದರೆ ಈ ಆಸೆ ಈಡೇರಿರಲಿಲ್ಲ. ಆಸೆಗೆ ವಯಸ್ಸು ಅಡ್ಡಿಯಾಗೋದಿಲ್ಲ ಅಲ್ಲವೇ..? ಈ ಇಳಿವಯಸ್ಸಿನಲ್ಲಿ ಅವರ ಆಸೆಯನ್ನು ಪೂರೈಸಿಕೊಂಡಿದ್ದು, ನೋಡುಗರ ಕಣ್ಣಂಚಿನಲ್ಲಿ ನೀರು ಹರಿದಿದೆ.
ಅಖಂಡ ಕರ್ನಾಟವನ್ನ ಆಳಬೇಕು ಅನ್ನೋದೇ ನನ್ನ ಮುಖ್ಯ ಆಸೆ: ಉಮೇಶ್ ಕತ್ತಿ
ಹೌದು, ಅಮೆರಿಕಾದ ಮಾರ್ಥಾ ಮಾ ಒಫೆಲಿಯಾ ಮೂನ್ ಟಕ್ಕರ್ ಗೆ 70 ವರ್ಷಗಳ ನಂತರ ಈ ಭಾಗ್ಯ ಒದಗಿಬಂದಿದೆ. 25ನೇ ವಯಸ್ಸಿನಲ್ಲಿ ವಿವಾಹವಾದ ಟಕ್ಕರ್ ಗೆ ಮದುವೆಯಲ್ಲಿ ಬಿಳಿ ಬಣ್ಣದ ಗೌನ್ ತೊಡಬೇಕೆಂಬ ಆಸೆಯಿತ್ತು. ಆದರೆ ಆ ಸಮಯದಲ್ಲಿ ಆಫ್ರಿಕನ್-ಅಮೆರಿಕನ್ ಸಮುದಾಯದ ಹೋರಾಟ ತೀವ್ರವಾಗಿತ್ತು. ಬಿಳಿ ಜನರು ಕಪ್ಪು ಜನಾಂಗದವರನ್ನು ದೂರವಿಡುತ್ತಿದ್ದರು.
ಆ ಸಮಯದಲ್ಲಿ ಎರಡೂ ಗುಂಪುಗಳು ಅವರಿಗೆ ಬೇರೆ-ಬೇರೆಯದಾದ ಅಂಗಡಿಗಳನ್ನು ಹೊಂದಿತ್ತು. ಆದರೆ, ಬಿಳಿ ಬಣ್ಣದ ಉಡುಪು ತೆಗೆದುಕೊಳ್ಳಲು ಕಪ್ಪು ವರ್ಣೀಯರಿಗೆ ಅಂಗಡಿ ಪ್ರವೇಶವಿರಲಿಲ್ಲ. ಹಾಗಾಗಿ ಇವರು ನೀಲಿ ಬಣ್ಣದ ಉಡುಪನ್ನು ಮದುವೆಯಲ್ಲಿ ಧರಿಸಿದ್ದರು.
ಮದುವೆಯಲ್ಲಿ ಮುಂಬೈ ಇಂಡಿಯನ್ಸ್ ಲೋಗೋ ಹಾಕಿಸಿಕೊಂಡ ಮದುಮಗಳು
ಇನ್ನು 70 ವರ್ಷಗಳ ಬಳಿಕ ಈ ವಿಚಾರವು ವೃದ್ಧೆಯ ಮೊಮ್ಮಗಳಿಗೆ ತಿಳಿಯಿತು. ಕೂಡಲೇ ತನ್ನ ಅಜ್ಜಿಗಾಗಿ ಬಿಳಿ ಬಣ್ಣದ ಗೌನ್ ಖರೀದಿಸಿದ ಮೊಮ್ಮಗಳು ಅಜ್ಜಿಗೆ ತೊಡಿಸಿದ್ದಾಳೆ. ಮಾರ್ಥಾ ಮಾ ಗೌನ್ ಧರಿಸಿ ಕನ್ನಡಿಯಲ್ಲಿ ನೋಡಿಕೊಂಡು ಸಂಭ್ರಮಿಸಿದ್ರು. ಅಲ್ಲಿ ನೆರೆದಿದ್ದವರ ಕಣ್ಣಂಚು ಒದ್ದೆಯಾಗಿತ್ತು. ವಧುವಿನ ಬಟ್ಟೆಯಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಾ ಎಂದು ಹೇಳಿದಾಗ ಅವರ ಕಣ್ಣಲ್ಲಿ ಆನಂದಭಾಷ್ಪ ಸುರಿಯಿತು.