ಬೆಂಗಳೂರು : ನಾನೇ ಕರ್ನಾಟಕದ ಮುಂದಿನ ಸಿಎಂ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಯಾದಗಿರಿಯಲ್ಲಿ ಮಾತನಾಡಿದ ಶಾಸಕ ಯತ್ನಾಳ್ ನೀವ್ಯಾರು ಕೂಡ ಹೆದರೋಕೆ ಹೋಗಬೇಡಿ, ಕರ್ನಾಟಕದ ಮುಂದಿನ ಸಿಎಂ ನಾನೇ ಆಗ್ತೀನಿ ಎಂದಿದ್ದಾರೆ. ಹಾಗೂ ಸ್ವಪಕ್ಷದವರ ವಿರುದ್ಧವೇ ಯತ್ನಾಳ್ ಮತ್ತೆ ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ವಿಜಯೇಂದ್ರರನ್ನು ನೋಡಿ ಜನ ವೋಟ್ ಹಾಕಲ್ಲ, ಯಾಕೆಂದರೆ ಇದು ಮೋದಿ ಚುನಾವಣೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ 28 ಸ್ಥಾನ ಗೆದ್ದೇ ಗೆಲ್ಲುತ್ತದೆ. ಸಿಎಂ ಆಗ್ತೀನಿ ಅಂತಾ ಕೆಲವರು ಈಗಲೇ ಬಿಳಿ ಅಂಗಿ ಹೊಲಿಸಿಕೊಂಡು ಕಾಯ್ತಿದ್ದಾರೆ. ಅವರೆಲ್ಲ ಹೊಂದಾಣಿಕೆ ಮಾಡಿಕೊಳ್ಳೋರು, ನಾನೇ ಕರ್ನಾಟಕದ ಮುಂದಿನ ಸಿಎಂ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.