ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಫೇಸ್ಬುಕ್ ಲೈವ್ ನಲ್ಲಿ ಮಹಾರಾಷ್ಟ್ರ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಶಾಸಕರು ಬಯಸಿದರೆ ನಾನು ರಾಜೀನಾಮೆ ನೀಡಲು ಸಿದ್ಧವಾಗಿದ್ದೇನೆ. ಶಾಸಕರು ನೇರವಾಗಿ ಬಂದು ನನ್ನೊಂದಿಗೆ ಮಾತನಾಡಲಿ ಎಂದು ಹೇಳಿದ್ದಾರೆ.
ನನ್ನ ವಿರುದ್ಧ ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ರಾಜ್ಯದ ಜನರ ಭೇಟಿಗೆ ಸಿಗುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಾರೆ. ನನಗೆ ಶಸ್ತ್ರಚಿಕಿತ್ಸೆ ಆಗಿರುವುದರಿಂದ ಜನರನ್ನು ಭೇಟಿಯಾಗಿರಲಿಲ್ಲ. ಕಳೆದ ಎರಡು, ಮೂರು ತಿಂಗಳಿಂದ ಜನರನ್ನು ಭೇಟಿಯಾಗಿರಲಿಲ್ಲ ಎಂದರು.
ಶಿವಸೇನೆಯ ಪ್ರತಿ ಹೃದಯದ ಬಡಿತ ಹಿಂದುತ್ವಕ್ಕೆ ಮೀಸಲಾಗಿದೆ. ಶಿವಸೇನೆಯ ಕೆಲವು ಶಾಸಕರು ಎಲ್ಲಿ ಹೋಗಿದ್ದಾರೆ ಎಂಬುದು ನನಗೆ ಬೇಕಿಲ್ಲ. ಶಿವಸೇನೆ ಕಾರ್ಯಕರ್ತರು ನಮ್ಮನ್ನು ಆರಿಸಿ ಕಳುಹಿಸಿದ್ದಾರೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಫೇಸ್ ಬುಕ್ ಲೈವ್ ನಲ್ಲಿ ಹೇಳಿದ್ದಾರೆ.
ಬಾಳಾ ಸಾಹೇಬರ ಆಶಯಗಳು ನಮ್ಮ ಜೊತೆಗೆ ಇವೆ. ಕೆಲವು ಶಾಸಕರು ಹೇಳದೆ ಕೇಳದೆ ನಾಪತ್ತೆಯಾಗಿದ್ದಾರೆ. ನಾವು ಎಲ್ಲಾ ಸವಾಲುಗಳನ್ನು ಎದುರಿಸಿ ನಿಂತಿದ್ದೇವೆ. ಇನ್ನೂ ಹಲವು ಶಾಸಕರು ವಾಪಸ್ ಬರಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್, NCP ವಿರೋಧಿಸಿಕೊಂಡು ಬಂದಿದ್ದೆವು. ಅವರೊಂದಿಗೆ ಮೈತ್ರಿ ಸರ್ಕಾರ ರಚಿಸಿದ್ದೇವೆ. ಶರದ್ ಪವಾರ್, ಸೋನಿಯಾಗಾಂಧಿ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದರು.