![](https://kannadadunia.com/wp-content/uploads/2024/08/4586369.png)
ಹೌದು, ಸೋಶಿಯಲ್ ಮೀಡಿಯಾದಲ್ಲಿ ಸೋಮವಾರ ಮಧ್ಯಾಹ್ನ ಕಾಣಿಸಿಕೊಂಡ ಪೋಸ್ಟ್ ಒಂದರಲ್ಲಿ ಶ್ರೇಯಸ್ ತಲ್ಪಾಡೆ ವಿಧಿವಶರಾಗಿದ್ದಾರೆ ಎಂದು ಹೇಳಲಾಗಿತ್ತು. ಕ್ಷಣಾರ್ಧದಲ್ಲಿಯೇ ಈ ಪೋಸ್ಟ್ ವೈರಲ್ ಆಗಿದ್ದು, ಇದು ಶ್ರೇಯಸ್ ತಲ್ಪಾಡೆ ಅವರ ಅಭಿಮಾನಿಗಳು, ಸ್ನೇಹಿತರಿಗೆ ಆಘಾತವನ್ನುಂಟು ಮಾಡಿದ್ದು, ಈ ಮಾಹಿತಿಯ ಸತ್ಯಾಸತ್ಯತೆ ತಿಳಿಯಲು ನಿರಂತರ ಪ್ರಯತ್ನ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿರುವ ಶ್ರೇಯಸ್ ತಲ್ಪಾಡೆ, ನಾನು ಆರೋಗ್ಯದಿಂದ, ಖುಷಿಖುಷಿಯಾಗಿ ಜೀವಂತವಾಗಿರುವೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಪೋಸ್ಟ್ ಹಾಕುವ ಕಿಡಿಗೇಡಿಗಳಿಗೆ ತಿಳಿ ಹೇಳಿರುವ ಅವರು, ನಾನು ಈ ಹಿಂದೆ ಹೃದಯಾಘಾತಕ್ಕೆ ಒಳಗಾದಾಗಿನಿಂದ ನನ್ನ ಪುತ್ರಿ ಸದಾ ಆತಂಕದಲ್ಲಿ ಇರುತ್ತಾಳೆ. ಇಂತಹ ಸುದ್ದಿ ಅವಳ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರಬಹುದು ಎಂಬುದನ್ನು ಸಾವಿನ ಸುಳ್ಳು ಸುದ್ದಿ ಹರಡುವವರಿಗೆ ತಿಳಿಯಲಿ ಎಂದಿದ್ದಾರೆ.
![](https://kannadadunia.com/wp-content/uploads/2024/08/cb7a7269-905d-4f5c-af40-d48d810a0ef0-783x1024.jpg)
![](https://kannadadunia.com/wp-content/uploads/2024/08/dd02371d-4664-4281-8170-c0d02e699d13-461x1024.jpg)