ಗೋವಾದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಮತದಾರರಿಗೆ ಕೋರಿಕೊಂಡಿದ್ದಾರೆ.
ಆಡಳಿತಾರೂಢ ಬಿಜೆಪಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ವಾರಣಾಸಿಗೆ ಭೇಟಿ ನೀಡಿದ್ದರ ವಿಚಾರವಾಗಿ ಮಾತನಾಡಿದ ಮಮತಾ, “ನಾನು ಸಹ ಬ್ರಾಹ್ಮಣ ಕುಟುಂಬದವಳು” ಎಂದಿದ್ದಾರೆ.
SSLC, ಐಟಿಐ ಪಾಸಾದವರಿಗೆ ಗುಡ್ ನ್ಯೂಸ್: HAL ನಲ್ಲಿ ಅಪ್ರೆಂಟಿಷಿಪ್ ತರಬೇತಿಗೆ ಅರ್ಜಿ ಆಹ್ವಾನ
ಗೋವಾದಲ್ಲಿ ಸಕ್ರಿಯವಾಗಿರುವ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್‌ನ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಿದ ಮಮತಾ, “ಗೋವಾದಲ್ಲಿ ಬಿಜೆಪಿ ಅಂತ್ಯವಾಗುವುದನ್ನು ನಾನು ನೋಡಲು ಇಚ್ಛಿಸುತ್ತೇನೆ, ಪ್ರತಿಯೊಬ್ಬರೂ ಒಂದಾಗಿ ಬಿಜೆಪಿಯನ್ನು ಮಣಿಸಬೇಕು,” ಎಂದಿದ್ದಾರೆ.
ಗೋವಾದ ಏಕೈಕ ಎನ್‌ಸಿಪಿ ಶಾಸಕ ಚರ್ಚಿಲ್ ಅಲೆಮಾವೋ ತಮ್ಮ ಪಕ್ಷದ ಶಾಸಕಾಂಗ ಘಟಕವನ್ನು ಟಿಎಂಸಿಯೊಂದಿಗೆ ವಿಲೀನಗೊಳಿಸಿದ್ದು, ತಮ್ಮನ್ನು ಟಿಎಂಸಿ ಶಾಸಕ ಎಂದು ಗುರುತಿಸಬೇಕೆಂದು ವಿಧಾನ ಸಭಾ ಸ್ಪೀಕರ್‌ಗೆ ಮನವಿ ಪತ್ರ ಬರೆದಿದ್ದಾರೆ. ಆದರೆ ಈ ವಿಲೀನವನ್ನು ಪ್ರಶ್ನಿಸಿರುವ ಎನ್‌ಸಿಪಿ, ಅಲೆಮಾವೋರನ್ನು ವಜಾಗೊಳಿಸುವಂತೆ ಕೋರಿ ಸ್ಪೀಕರ್ ಬಳಿ ಮನವಿ ಮುಂದಿಟ್ಟಿದೆ.