ಗ್ರಾಹಕರಿಂದ ನಿರೀಕ್ಷಿತ ಬೇಡಿಕೆ ಕಂಡು ಬರದೇ ಇರುವುದು ಮತ್ತು ಉತ್ಪಾದನೆ ಮಾಡಿದ ಕಾರುಗಳ ಮಾರಾಟದಲ್ಲಿ ಕುಂಠಿತವಾದ ಹಿನ್ನೆಲೆಯಲ್ಲಿ ಹುಂಡೈ ತನ್ನ ಜನಪ್ರಿಯ ಸ್ಯಾಂಟ್ರೋ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.
ಒಂದು ಸಮಯದಲ್ಲಿ ಸ್ಯಾಂಟ್ರೋ ಕಾರಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಇದೊಂದು ಬಜೆಟ್ ಕಾರು ಆಗಿದ್ದರಿಂದ ಮಧ್ಯಮ ವರ್ಗದ ಜನರು ಹೆಚ್ಚು ಖರೀದಿ ಮಾಡುತ್ತಿದ್ದರು. ಆದರೆ, ಹಲವಾರು ಕಂಪನಿಗಳು ಕಡಿಮೆ ದರದಲ್ಲಿ ಹೆಚ್ಚು ಫೀಚರ್ಸ್ ಇರುವ ಕಾರುಗಳನ್ನು ಮಾರುಕಟ್ಟೆಗೆ ತಂದ ಹಿನ್ನೆಲೆಯಲ್ಲಿ ಅವುಗಳಿಗೆ ಸಮರ್ಪಕವಾದ ಸ್ಪರ್ಧೆ ನೀಡುವಲ್ಲಿ ಹಿಂದೆ ಬಿದ್ದ ಹುಂಡೈ, ಸ್ಯಾಂಟ್ರೋ ಕಾರಿನ ಉತ್ಪಾದನೆಯನ್ನೇ ಸ್ಥಗಿತಗೊಳಿಸಬೇಕಾಗಿದೆ.
ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್: ಗ್ರೂಪಿನಿಂದ ಎಕ್ಸಿಟ್ ಆಗುವುದು ಇನ್ನು ಮತ್ತಷ್ಟು ಸುಲಭ
ಕೊರಿಯಾದ ಕಾರು ತಯಾರಕ ಸಂಸ್ಥೆಯಾದ ಹುಂಡೈ 1998 ರಲ್ಲಿ ಭಾರತದಲ್ಲಿ ತನ್ನ ಸ್ಯಾಂಟ್ರೋ ಕಾರನ್ನು ಪರಿಚಯಿಸಿತ್ತು ಮತ್ತು ತನ್ನ ಫಸ್ಟ್-ಜನರೇಶನ್ ಮಾಡೆಲ್ ಕಾರನ್ನು 2014 ರವರೆಗೆ ಮಾರಾಟ ಮಾಡುತ್ತಿತ್ತು. ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಕಾರು ಉತ್ಪಾದನಾ ಘಟಕದಲ್ಲಿ ಈ ಕಾರನ್ನು ಉತ್ಪಾದಿಸಲಾಗುತ್ತಿತ್ತು.
ಮಾಧ್ಯಮಗಳ ವರದಿ ಪ್ರಕಾರ ಹುಂಡೈ ಕಳೆದ ವಾರ ಸ್ಯಾಂಟ್ರೋ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಆರಂಭದಿಂದಲೂ ಸ್ಯಾಂಟ್ರೋ ಕಾರು ಭಾರತದಲ್ಲಿ ಅತ್ಯಧಿಕ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಜನಪ್ರಿಯತೆಯನ್ನು ಗಳಿಸುವ ಮೂಲಕ ಹುಂಡೈಗೆ ತನ್ನದೇ ಖ್ಯಾತಿಯನ್ನು ತಂದುಕೊಟ್ಟಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸ್ಯಾಂಟ್ರೋ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತ್ತಲ್ಲದೇ, ಬೇಡಿಕೆಯೂ ಕುಸಿಯುತ್ತಾ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರಿನ ಉತ್ಪಾದನೆಯನ್ನೇ ಸ್ಥಗಿತಗೊಳಿಸುವುದು ಕಂಪನಿಗೆ ಅನಿವಾರ್ಯವಾಗಿತ್ತು.