
ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ನೂತನವಾಗಿ ಬಿಡುಗಡೆ ಮಾಡಿರುವನ್ಯೂ ಗ್ರಾಂಡ್ ಐ10 NIOS ಕಾರಿನ ಬುಕಿಂಗ್ ಆರಂಭಿಸಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರು, ಗುಣಮಟ್ಟದ ಒಳಾಂಗಣ ವಿನ್ಯಾಸದ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ.
ಕಾರಿನಲ್ಲಿ ನಾಲ್ಕು ಏರ್ ಬ್ಯಾಗ್ ಗಳಿದ್ದು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಹೊಂದಿದೆ. ಕ್ರೂಸ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ.
ಪೋಲಾರ್ ವೈಟ್, ಟೈಪೂನ್ ಸಿಲ್ವರ್, ಟೈಟಾನ್ ಗ್ರೇ, ಸ್ಪಾರ್ಕ್ ಗ್ರೀನ್, ಟೀಲ್ ಬ್ಲೂ ಹಾಗೂ ಫಿಯರಿ ರೆಡ್ ವರ್ಣಗಳಲ್ಲಿ ಲಭ್ಯವಿದ್ದು, ಸ್ಪಾರ್ಕ್ ಗ್ರೀನ್ ಕಪ್ಪು ಚಾವಣಿ ಹಾಗೂ ಪೋಲಾರ್ ವೈಟ್ ಕಪ್ಪು ಚಾವಣಿ ಜೊತೆ ಸಿಗಲಿದೆ.

