ಕಾರು ತಯಾರಿಕೆಯ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಹ್ಯುಂಡೈ ಮೋಟರ್ ಇಂಡಿಯಾ GRAND i10 NIOS ನ ಕಾರ್ಪೊರೇಟ್ ಎಡಿಶನ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದರ ಬೆಲೆ 6.28 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ ಬೆಲೆ) ಆರಂಭವಾಗಲಿದೆ.
1.2 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ಚಾಲಿತ ಈ ಹೊಸ ಮಾದರಿಯ ಕಾರು ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಎರಡರಲ್ಲೂ ಲಭ್ಯವಿದೆ.
ಮ್ಯಾನ್ಯುವಲ್ ಮಾದರಿಯ ಕಾರಿನ ಬೆಲೆ 6.28 ಲಕ್ಷ ರೂಪಾಯಿಗಳಿಂದ ಆರಂಭವಾದರೆ, ಆಟೋಮ್ಯಾಟಿಕ್ ಕಾರಿನ ಬೆಲೆ 6.97 ಲಕ್ಷ ರೂಪಾಯಿಗಳಿಂದ ಆರಂಭವಾಗಲಿದೆ. ಇದು ಭಾರತದ ಹೊಸ ಪೀಳಿಗೆಯ ಯುವ ಸಮುದಾಯದ ಗ್ರಾಹಕರ ಅಭಿರುಚಿಗೆ ತಕ್ಕಂತೆ ತಯಾರಾಗಿರುವ ಕಾರು ಎಂದು ಕಂಪನಿ ಹೇಳಿಕೊಂಡಿದೆ.
BIG NEWS: ಪರಿಷತ್ ಟಿಕೆಟ್ ಕೈತಪ್ಪಿದ್ದಕ್ಕೆ ಕಾರ್ಯಕರ್ತರ ಆಕ್ರೋಶ; ರಾಜಕೀಯ ನಿಂತ ನೀರಲ್ಲ……ಸಹನೆ, ಸೌಜನ್ಯದಿಂದ ಇರುವಂತೆ ಬೆಂಬಲಿಗರಿಗೆ ಮನವಿ ಮಾಡಿದ ಬಿ.ವೈ. ವಿಜಯೇಂದ್ರ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹ್ಯುಂಡೈ ಮೋಟರ್ ಇಂಡಿಯಾದ ನಿರ್ದೇಶಕ ತರುಣ್ ಗಾರ್ಗ್, ನಾವು ಭಾರತದ ಯುವ ಪೀಳಿಗೆಗೆ ಇಷ್ಟವಾಗುವಂತಹ ಸ್ಪೋರ್ಟಿ ಮತ್ತು ಹೈಟೆಕ್ ಆಗಿರುವ GRAND i10 NIOS ಕಾರ್ಪೊರೇಟ್ ಎಡಿಶನ್ ನ ಕಾರನ್ನು ಪರಿಚಯಿಸುತ್ತಿರುವುದಕ್ಕೆ ಸಂತಸವೆನಿಸುತ್ತಿದೆ ಎಂದಿದ್ದಾರೆ.
ಈ ಕಾರ್ಪೊರೇಟ್ ಎಡಿಶನ್ ಕೆಂಪು ಬಣ್ಣದ ಸೀಟು, ಎಸಿ ವೆಂಟ್ಸ್ ಮತ್ತು ಗೇರ್ ಬೂಟ್ ನೊಂದಿಗೆ ಬ್ಲ್ಯಾಕ್ ಇಂಟೀರಿಯರ್ಸ್ ಅನ್ನು ಒಳಗೊಂಡಿದೆ. ಇದರಲ್ಲಿ 17.14 ಸೆಂಟಿಮೀಟರ್ ಗಳ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಮತ್ತು ನ್ಯಾವಿಗೇಷನ್ ಸೌಲಭ್ಯವನ್ನು ಹೊಂದಿದೆ.