alex Certify ಎಲೆಕ್ಟ್ರಿಕ್‌ ಸನ್‌ರೂಫ್‌ನೊಂದಿಗೆ ಬಂದಿದೆ ಹ್ಯುಂಡೈ ಕಾರು; ಕಡಿಮೆ ಬೆಲೆ ಮತ್ತು ಅದ್ಭುತ ಫೀಚರ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಟ್ರಿಕ್‌ ಸನ್‌ರೂಫ್‌ನೊಂದಿಗೆ ಬಂದಿದೆ ಹ್ಯುಂಡೈ ಕಾರು; ಕಡಿಮೆ ಬೆಲೆ ಮತ್ತು ಅದ್ಭುತ ಫೀಚರ್ಸ್‌

 

ಹುಂಡೈ ಮೋಟಾರ್ ಇಂಡಿಯಾ ತನ್ನ ವೆನ್ಯೂ ಕಾರನ್ನು ನವೀಕರಿಸಿದೆ. ಹ್ಯುಂಡೈ ವೆನ್ಯೂನ S(O)+ ರೂಪಾಂತರವನ್ನು ನವೀಕರಿಸಿ ಬಿಡುಗಡೆ ಮಾಡಿದೆ. ಈ ಹೊಸ ರೂಪಾಂತರದಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ಫೀಚರ್‌  ಸೇರಿಸಲಾಗಿದೆ. ಇದರ ಜೊತೆಗೆ ಇನ್ನೂ ಅನೇಕ ಫೀಚರ್‌ಗಳನ್ನು ಅಳವಡಿಸಲಾಗಿದ್ದು, ಹೆಚ್ಚು ಆರಾಮದಾಯಕ ಸವಾರಿ ಮಾಡಬಹುದು.

ಹೊಸ ಹುಂಡೈ ವೆನ್ಯೂ S(O)+ ರೂಪಾಂತರದಲ್ಲಿ 1.2 ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಠ 82 bhp ಶಕ್ತಿಯೊಂದಿಗೆ 114 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 350 ಲೀಟರ್ ಬೂಟ್ ಸ್ಪೇಸ್ ಅನ್ನು ಸಹ ಹೊಂದಿದೆ. ಈ ಕಾರು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಪರ್ಕ ಹೊಂದಿದೆ.

ಹೊಸ ಹ್ಯುಂಡೈ ವೆನ್ಯೂನಲ್ಲಿ ಸ್ಮಾರ್ಟ್ ಎಲೆಕ್ಟ್ರಿಕ್ ಸನ್‌ರೂಫ್‌ನೊಂದಿಗೆ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಒದಗಿಸಲಾಗಿದೆ. ಎಲ್‌ಇಡಿ ಡಿಆರ್‌ಎಲ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ವೈಶಿಷ್ಟ್ಯಗಳನ್ನು ಈ ಕಾರಿನಲ್ಲಿ ಕಾಣಬಹುದು. ಇದು 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸಹ ಹೊಂದಿದೆ. ಕಾರ್ ಡಿಜಿಟಲ್ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್ ಜೊತೆಗೆ TFT ಡಿಸ್‌ಪ್ಲೇ ಕೂಡ ಇದೆ.

ಹ್ಯುಂಡೈ ವೆನ್ಯೂನ ಈ ಹೊಸ ರೂಪಾಂತರದಲ್ಲಿ 6 ಏರ್‌ಬ್ಯಾಗ್‌ಗಳೊಂದಿಗೆ TPMS ಹೈಲೈನ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಸ್ವಯಂಚಾಲಿತ ಹೆಡ್‌ಲ್ಯಾಂಪ್‌ಗಳು, ಹಿಲ್ ಅಸಿಸ್ಟ್ ಕಂಟ್ರೋಲ್ ಮತ್ತು ಹಿಲ್ ಕ್ಯಾಮೆರಾದೊಂದಿಗೆ ಕಾರಿಗೆ ಸುರಕ್ಷತೆಯನ್ನು ಒದಗಿಸುವಂತಹ ಸುರಕ್ಷತಾ ವೈಶಿಷ್ಟ್ಯಗಳಿವೆ.

ಈ ಕಾರಿನ ಆರಂಭಿಕ ಬೆಲೆ 9.99 ಲಕ್ಷ ರೂಪಾಯಿ. ಆಧುನಿಕ ಫೀಚರ್‌ಗಳನ್ನು ಹೊಂದಿರುವ ಉತ್ತಮ ಬಜೆಟ್ ಕಾರು ಇದಾಗಿದೆ. ಈ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್‌ಗೆ ಪೈಪೋಟಿ ಒಡ್ಡಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...