ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್ ಎಂದೇ ಕರೆಯಲಾಗುತ್ತದೆ. ಜನರನ್ನ ನಿಧಾನವಾಗಿ ಸಾವಿನತ್ತ ಕರೆದೊಯ್ಯುವ ಇದು ಸಂತಾನೋತ್ಪತ್ತಿ ಮೇಲೂ ಪರಿಣಾಮ ಬೀರ್ತಿದೆ. ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ಈ ಬಗ್ಗೆ ಆಘಾತಕಾರಿ ವರದಿ ನೀಡಿದೆ.
ಬಾಹ್ಯವಾಗಿ ಅಧಿಕ ರಕ್ತದೊತ್ತಡದ ಲಕ್ಷಣಗಳು ಕಾಣಿಸುವುದಿಲ್ಲ. ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ, ದೂರದಿಂದ ನೋಡಿದಾಗ ಸಾಮಾನ್ಯವಾಗಿ ಕಾಣಿಸುತ್ತಾನೆ. ಆದರೆ ಒಳಗೆ ತೊಂದರೆ ಅನುಭವಿಸುತ್ತಾನೆ. ಕೊರೊನಾ ಕಾಲದಲ್ಲಿ ಈ ರೋಗ ಏಕಾಏಕಿ ಹೆಚ್ಚಾಗಿದೆ. ಉದ್ಯೋಗ ಕಳೆದುಕೊಳ್ಳುವ ಭೀತಿ, ಅನಾರೋಗ್ಯ, ಕುಟುಂಬ ಪಾಲನೆ ಜವಾಬ್ದಾರಿ ಮೊದಲಿಗಿಂತ ಹೆಚ್ಚು ಚಿಂತೆಗೀಡು ಮಾಡಿದೆ. ಇದ್ರಿಂದ ಅಧಿಕ ರಕ್ತದೊತ್ತಡಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗಿದೆ.
ಅಧಿಕ ರಕ್ತದೊತ್ತಡದ ಪ್ರಕರಣಗಳನ್ನು ಕಡಿಮೆ ಮಾಡಲು, ದೇಶದಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಬೇಕೆಂದು ತಜ್ಞರು ಹೇಳಿದ್ದಾರೆ. 15 ರಿಂದ 49 ವರ್ಷದ ಭಾರತದ ಮಹಿಳೆಯರನ್ನು ಅಧ್ಯಯನ ಮಾಡಲಾಗಿದೆ. ಇದರಲ್ಲಿ ಪ್ರತಿ 5 ಮಹಿಳೆಯರಲ್ಲಿ ಒಬ್ಬರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಆಶ್ಚರ್ಯಕರ ಸಂಗತಿಯೆಂದರೆ, ತಾವು ಅನಾರೋಗ್ಯಕ್ಕೆ ಒಳಗಾಗಿದ್ದೇವೆಂಬುದು ಈ ಮಹಿಳೆಯರಿಗೆ ತಿಳಿದಿಲ್ಲ.ಹಾಗಾಗಿ ಅವರು ಈ ಕಾಯಿಲೆಗೆ ಯಾವುದೇ ಚಿಕಿತ್ಸೆ ಪಡೆಯುವುದಿಲ್ಲ. ಇದು ಅವರ ವೈಯಕ್ತಿಕ ಜೀವನ ಮತ್ತು ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರ್ತಿದೆ.
ದೇಶದ ಸುಮಾರು 10 ಕೋಟಿ 13 ಲಕ್ಷ ಜನಸಂಖ್ಯೆ ಈ ಸಮಸ್ಯೆಯನ್ನು ಎದುರಿಸುತ್ತಿದೆ. ಈ ರೋಗವು ಆಕಸ್ಮಿಕ ಸಾವಿಗೆ ಪ್ರಮುಖ ಕಾರಣವಾಗಿದೆ. ಭಾರತದಲ್ಲಿ ಸುಮಾರು ಶೇಕಡಾ 30 ರಷ್ಟು ವಯಸ್ಕರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಪ್ರತಿವರ್ಷ 17.7 ಕೋಟಿಗಿಂತಲೂ ಹೆಚ್ಚು ಜನರು ಇದ್ರಿಂದ ಸಾವನ್ನಪ್ಪುತ್ತಿದ್ದಾರೆ. ಈ ಸಾವುಗಳಲ್ಲಿ ಸುಮಾರು ಶೇಕಡಾ 20ರಷ್ಟು ಅಂದರೆ 36 ಲಕ್ಷ ಜನರು ಭಾರತದಲ್ಲಿ ಸಾಯುತ್ತಿದ್ದಾರೆ.