ಶಾರೀರಿಕ ಸಂಬಂಧ ಮನಸ್ಸನ್ನು ಉಲ್ಲಾಸಗೊಳಿಸುವ ಜೊತೆಗೆ ಒತ್ತಡ ಕಡಿಮೆ ಮಾಡಿ ಆರೋಗ್ಯ ವೃದ್ಧಿಸುತ್ತದೆ ಎಂಬುದನ್ನು ಅನೇಕ ಸಂಶೋಧನೆಗಳು ಹೇಳಿವೆ. ಹಾಗೆ ಸಂಬಂಧದ ನಂತ್ರ ಶರೀರ ಹಾಗೂ ಖಾಸಗಿ ಭಾಗಗಳನ್ನು ಶುಚಿಯಾಗಿಡುವುದು ಬಹಳ ಮುಖ್ಯ. ಶುಚಿತ್ವದ ಕೊರತೆಯುಂಟಾದಲ್ಲಿ ಮಹಿಳೆಯರಿಗೆ ಖಾಸಗಿ ಭಾಗಕ್ಕೆ ಸೋಂಕು ತಗಲಿ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.
ಯೋನಿ ನೈರ್ಮಲ್ಯ ಬಹಳ ಮುಖ್ಯ. ಮೊದಲೇ ಎಚ್ಚರಿಕೆ ಕೈಗೊಂಡಲ್ಲಿ ಮುಂದಾಗುವ ಸಮಸ್ಯೆಯನ್ನು ತಪ್ಪಿಸಬಹುದು. ಮುಜುಗರಪಟ್ಟಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತದೆ.
ಮೂತ್ರ ಮಾಡುವುದನ್ನು ಮರೆಯಬೇಡಿ. ಶಾರೀರಿಕ ಸಂಬಂಧ ಬೆಳೆಸುವ ಮೊದಲು ಹಾಗೂ ನಂತ್ರ ಮೂತ್ರ ಮಾಡುವುದು ಬಹಳ ಅವಶ್ಯಕ. ಬ್ಯಾಕ್ಟೀರಿಯಾ ಹಾಗೂ ಜೀವಾಣುಗಳು ಮೂತ್ರದ ಮೂಲಕ ಹೊರಗೆ ಹೋಗುವುದರಿಂದ ಸೋಂಕು ಬರದಂತೆ ತಡೆಯಬಹುದಾಗಿದೆ.
ಸ್ವಚ್ಛ ನೀರಿನಿಂದ ಖಾಸಗಿ ಭಾಗವನ್ನು ತೊಳೆಯುವುದು ಉತ್ತಮ. ಮಾರುಕಟ್ಟೆಯಲ್ಲಿ ಖಾಸಗಿ ಭಾಗಗಳನ್ನು ಸ್ವಚ್ಛಗೊಳಿಸಲು ಅನೇಕ ಬಗೆಯ ಕ್ರೀಂಗಳು ಬಂದಿವೆ. ಆದ್ರೆ ಅದು ಖಾಸಗಿ ಭಾಗಕ್ಕೆ ಹಾನಿಯುಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಿ.
ನೀರಿನಿಂದ ಖಾಸಗಿ ಭಾಗವನ್ನು ಸ್ವಚ್ಛಗೊಳಿಸಿದ ನಂತ್ರ ಒಣಗಿರುವ, ಕ್ಲೀನ್ ಆಗಿರುವ ಒಳ ಉಡುಪನ್ನು ಧರಿಸಿ.
ಕೆಲವರು ಶಾರೀರಿಕ ಸಂಬಂಧ ಬೆಳೆಸಿದ ತಕ್ಷಣ ಆಹಾರ ಸೇವನೆ ಮಾಡ್ತಾರೆ. ಮತ್ತೆ ಕೆಲವರು ಧೂಮಪಾನ ಮಾಡ್ತಾರೆ. ಆದ್ರೆ ಶಾರೀರಿಕ ಸಂಬಂಧ ಬೆಳೆಸಿದ ನಂತ್ರ 2-3 ಗ್ಲಾಸ್ ನೀರು ಕುಡಿಯುವುದು ಒಳ್ಳೆಯದು.