ಹೈದರಾಬಾದ್: ಅಬ್ಬಾಸ್ ಟವರ್ಸ್ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಹೈದರಾಬಾದ್ ನ ಮದೀನಾ ವೃತ್ತದಲ್ಲಿ ನಡೆದಿದೆ.
ಬೆಂಕಿ ಅವಘಡದಲ್ಲಿ ಕಟ್ಟಡದಲ್ಲಿರುವ 40 ಮಳಿಗೆಗಳಿಗೆ ಹಾನಿಯಾಗಿವೆ. ಕಟ್ಟಡದಲ್ಲಿ ಒಟ್ಟು 300 ಜವಳಿ ಮಳಿಗೆಗಳಿವೆ. ಅವುಗಳಲ್ಲಿ 40 ಮಳಿಗೆಗಳು ಸುಟ್ಟು ಕರಕಲಾಗಿವೆ. ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಇಂದು ಬೆಳಗಿನ ಜಾವ 2:15ರ ಸುಮಾರಿಗೆ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ಲಭ್ಯವಾಗಿದ್ದು, ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಕಟ್ಟಡದಲ್ಲಿದ್ದ ಹಾಗೂ ಪಕ್ಕದ ಕಟ್ಟಡದಲ್ಲಿದ್ದ ಕುಟುಂಬ ಹಾಗೂ ಭದ್ರತಾ ಸಿಬ್ಬಂದಿಗಳು ಸೇರಿ 12 ಜನರನ್ನು ರಕ್ಷಿಸಲಾಗಿದೆ.