
ಹೈದರಾಬಾದ್‌ನ 30 ವರ್ಷದ ಖಾಸಗಿ ವಲಯದ ಉದ್ಯೋಗಿಯೊಬ್ಬರು ಇತ್ತೀಚೆಗೆ ಹೊಸ ಆನ್‌ಲೈನ್ ವಂಚನೆಗೆ ಬಲಿಯಾಗಿದ್ದಾರೆ. ಅವರು 1 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. ಜನರನ್ನು ವಂಚಿಸಲು ಸೈಬರ್ ಅಪರಾಧಿಗಳು ಹೊಸ ತಂತ್ರವನ್ನು ಅಳವಡಿಸಿಕೊಂಡಿದ್ದು, ಇದು ಎಲ್ಲರನ್ನು ಆತಂಕಕ್ಕೊಳಪಡಿಸಿದೆ.
ವಂಚಿತರಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸ್ ಅಪ್ ಸಂದೇಶ ಬಂದಿದೆ. ಅದರಲ್ಲಿ ಗ್ರಾಹಕ ಬೆಂಬಲ ಶೀರ್ಷಿಕೆಯ ಅಡಿ APK ಫೈಲ್ ಲಿಂಕ್ ಕಳುಹಿಸಲಾಗಿದೆ. ಹೊಸ ಕ್ರೆಡಿಟ್ ಕಾರ್ಡ್ ಕಾರ್ಡ್ ಮಾಹಿತಿ ನೀಡುವಂತೆ ಅಲ್ಲಿ ಕೇಳಲಾಗಿತ್ತು. ಅಧಿಕೃತ ಎನ್ನುವ ನಂಬಿಕೆಯಲ್ಲಿ ಆತ ಫೈಲ್ ಡೌನ್‌ಲೋಡ್ ಮಾಡಿದ್ದಾನೆ.
ಆದಾಗ್ಯೂ, APK ಅನ್ನು ಸ್ಥಾಪಿಸಿದ ತಕ್ಷಣ, ಸ್ಕ್ಯಾಮರ್‌ಗಳು ಮೊಬೈಲ್ ಒಳ ಹೊಕ್ಕಿ ಎಲ್ಲ ಮಾಹಿತಿ ಪಡೆದಿದ್ದಾರೆ. ಎಲ್ಲ ಮಾಹಿತಿ ನೀಡಿದ ನಂತ್ರ ಫೋನ್ ನ ಎಲ್ಲ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಎಸ್ ಎಂಎಸ್, ಕರೆ ಸೇರಿದಂತೆ ಎಲ್ಲವೂ ಕಡಿತವಾಗಿತ್ತು. ಜೊತೆಗ ಇ ಸಿಮ್ ಬಳಸಿ ವಂಚಕರು ಹಣವನ್ನು ವಿತ್ ಡ್ರಾ ಮಾಡಿದ್ದಾರೆ. ಇದಕ್ಕೆ ಯಾವುದೇ ಒಟಿಪಿ ಅಗತ್ಯವಿರಲಿಲ್ಲ. ಕೆಲವೇ ಕ್ಷಣಗಳಲ್ಲಿ ಖಾತೆಯಿಂದ 1,06,650 ರೂಪಾಯಿ ವಿತ್ ಡ್ರಾ ಆಗಿರೋದು ಆತನಿಗೆ ತಿಳಿದಿದೆ. ಈ ಸಂಬಂಧ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾನೆ.