ಹೈದರಾಬಾದ್: ಘಟ್ಕೇಸರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಟೋ ಚಾಲಕರು ಆಘಾತಕಾರಿ ಕೃತ್ಯವೆಸಗಿದ್ದಾರೆ. ಪದವಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬೆತ್ತಲೆ ಎಸೆದು ಪರಾರಿಯಾಗಿದ್ದಾರೆ.
ಮೆಡ್ಚಲ್ ಕಾಲೇಜ್ ನಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿನಿ ಕಾಲೇಜು ಮುಗಿಸಿ ಬಸ್ನಲ್ಲಿ ಬಂದಿದ್ದಾಳೆ. ಬಸ್ ನಿಲುಗಡೆ ಸ್ಥಳದಿಂದ ಮನೆಗೆ ಹೋಗಲು ಆಟೋ ಹತ್ತಿದ್ದು, ಆಟೋ ಚಾಲಕ ಮತ್ತು ಆತನ ಜೊತೆಗಿದ್ದ ಇಬ್ಬರು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿ ಬೆತ್ತಲಾಗಿದ್ದ ವಿದ್ಯಾರ್ಥಿನಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ನರಳಾಡುತ್ತಾ ರಸ್ತೆಗೆ ಬಂದ ವಿದ್ಯಾರ್ಥಿನಿ ಸ್ಥಳೀಯ ಜನರ ನೆರವಿನಿಂದ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕೆಯನ್ನು ಮೆಡಿಪಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟ್ಕೇಸರ್ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ಮಾಹಿತಿ ಪಡೆದು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.