ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನೆಲೆಸಿರುವ 38 ವರ್ಷದ ಹೈದರಾಬಾದ್ ಮಹಿಳೆಗೆ ಲಾಟರಿ ಮೂಲಕ ಅದೃಷ್ಟ ಒದಗಿಬಂದಿದ್ದು, 2 ಕೋಟಿ ರೂಪಾಯಿ ಹಣ ಸಿಕ್ಕಿದೆ.
ಯುಎಇ ಮೂಲದ ಮಹ್ಝೂಝ್ ಡ್ರಾ ಆಯೋಜಿಸಿದ್ದ ಲಾಟರಿಯಲ್ಲಿ ಹಮೇದಾ ಬೇಗಂ ಅದೃಷ್ಟವಂತರಾಗಿದ್ದಾರೆ. ಲಾಟರಿಯ ಲಕ್ಕಿ ಡ್ರಾನಲ್ಲಿ ಅವರು 1 ಮಿಲಿಯನ್ ದಿರ್ಹಮ್ ಹಣ ಗಳಿಸಿದ್ದಾರೆ. ಅಂದರೆ 2, 22, 28,303 ರೂಪಾಯಿ ಗೆದ್ದಿದ್ದಾರೆ. ಏಪ್ರಿಲ್ 1 ರಂದು ನಡೆದ 122 ನೇ ಸಾಪ್ತಾಹಿಕ ಮಹ್ಝೂಜ್ ಡ್ರಾದಲ್ಲಿ ಆರು ವಿಜೇತ ಸಂಖ್ಯೆಗಳಲ್ಲಿ ಹಮೇದಾ ಬೇಗಂರ ಐದು ಸಂಖ್ಯೆ ಹೊಂದಿಕೆಯಾಯಿತು.
ಹಮೇದಾ ಬೇಗಂ ಅವರು ಕಳೆದ ಮೂರು ವರ್ಷಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ಅಬುಧಾಬಿಯಲ್ಲಿ ನೆಲೆಸಿದ್ದಾರೆ ಮತ್ತು ಅಲ್ಲಿ ವೈದ್ಯಕೀಯ ಕೋಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಮೇದಾ ತನ್ನ ಟಿಕೆಟ್‌ಗೆ ಪ್ರಥಮ ಬಹುಮಾನ ಬಂದಿರುವುದನ್ನು ಕೇಳಿದ ನಂತರ ತನ್ನ ಸಂಪಾದನೆಯನ್ನು ತನ್ನ ಕುಟುಂಬದ ಭವಿಷ್ಯಕ್ಕಾಗಿ ಮತ್ತು ತನ್ನ ನಾಲ್ಕು ಮಕ್ಕಳ ಶಿಕ್ಷಣಕ್ಕಾಗಿ ಬಳಸಿಕೊಳ್ಳುವುದಾಗಿ ಹೇಳಿದರು.
ಕುತೂಹಲಕಾರಿಯಾಗಿ ಮಾರ್ಚ್ 4 ರಂದು ಅನಾವರಣಗೊಂಡ ಹೊಸ ಬಹುಮಾನ ರಚನೆಯ ಅಡಿಯಲ್ಲಿ ಖಾತರಿಪಡಿಸಿದ ಒಂದು ಮಿಲಿಯನ್ ದಿರ್ಹಮ್‌ಗಳನ್ನು ಪಡೆದ ನಾಲ್ಕನೇ ವ್ಯಕ್ತಿ ಹಮೇದಾ ಬೇಗಂ ಆಗಿದ್ದಾರೆ. ಅದರಲ್ಲಿನ ಮೊದಲ ಮಹಿಳೆ ಕೂಡ ಹಮೇದಾ ಬೇಗಂ ಅವರೇ ಆಗಿದ್ದಾರೆ. ಈ ನವೀಕರಿಸಿದ ಬಹುಮಾನದ ರಚನೆಯಲ್ಲಿನ ಹೊಸ ಅಂಶವೆಂದರೆ ಒಬ್ಬ ಆಟಗಾರನು ಪ್ರತಿ ವಾರ ಬಿಲಿಯನೇರ್ ಆಗಬಹುದಾಗಿದೆ.