ಅಲ್ಲು ಅರ್ಜುನ್ ನಟನೆಯ ’ಪುಷ್ಪ’ ಚಿತ್ರದ ಜನಪ್ರಿಯತೆಯನ್ನು ಬಳಸಿಕೊಂಡಿರುವ ಹೈದರಾಬಾದ್ ಸಂಚಾರಿ ಪೊಲೀಸರು ದ್ವಿಚಕ್ರ ವಾಹನ ಸವಾರರಲ್ಲಿ ಹೆಲ್ಮೆಟ್ ಧಾರಣೆಯ ಮಹತ್ವ ಸಾರಿ ಹೇಳಿದ್ದಾರೆ.
ಪೊಲೀಸ್ ಇಲಾಖೆ ಹಾಕಿರುವ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಚೆಕ್ಡ್ ಶರ್ಟ್ ಧರಿಸಿದ್ದು(ಚಿತ್ರದ ದೃಶ್ಯ) ಹೆಲ್ಮೆಟ್ ಹಾಕಿಕೊಂಡು ಬೈಕ್ ಚಲಾಯಿಸುತ್ತಿರುವುದನ್ನು ನೋಡಬಹುದಾಗಿದೆ. ಹೆಲ್ಮೆಟ್‌ಗಳಿಂದ ಹೇಗೆ ಜೀವಗಳು ಉಳಿಯುತ್ತವೆ ಎಂದು ಪೋಸ್ಟ್‌ನಲ್ಲಿ ಒತ್ತಿ ತಿಳಿಸಲಾಗಿದೆ.
ವಾರ್ಷಿಕ ಡೇಟಾ, ಕರೆ, ಎಸ್ಎಂಎಸ್ ಸೌಲಭ್ಯ: Airtel, Jio, Vi ನಲ್ಲಿ ಯಾವುದು ಬೆಸ್ಟ್…? ಇಲ್ಲಿದೆ ಮುಖ್ಯ ಮಾಹಿತಿ
ದಾಖಲೆಯ 300 ಕೋಟಿ ಕಲೆಕ್ಷನ್ ಮಾಡಿರುವ ’ಪುಷ್ಪ’ ಹಿಂದಿ ಆವೃತ್ತಿಯಲ್ಲೇ 90 ಕೋಟಿ ರೂಪಾಯಿ ಬಾಚಿಕೊಂಡಿದೆ. ಬಿಡುಗಡೆಯಾದ ತಿಂಗಳ ಬಳಿಕವೂ ಸದ್ದು ಮಾಡುತ್ತಿರುವ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣರ ಈ ಚಿತ್ರವು ದಾಖಲೆಗಳನ್ನು ಸೃಷ್ಟಿಸುತ್ತಿದೆ.