ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿಂದಿನ ದಿನದಂದು ಮೊದಲ ಬಾರಿಗೆ ಸೇಲಿಂಗ್ ಚಟುವಟಿಕೆ ಕಂಡ ಹೈದರಾಬಾದ್ನ ದುರ್ಗಂ ಚೆರುವು ಕೆರೆಯಲ್ಲಿ ಸಾಹಸ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ.
ಈ ಕೆರೆಯಲ್ಲಿ ಸೇಲಿಂಗ್, ಕಯಾಕಿಂಗ್ ಹಾಗೂ ಕೆನೋಯಿಂಗ್ ನಂಥ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರ (ಎಚ್ಎಂಡಿಎ) ಅನುಮತಿ ನೀಡಿದೆ ಎಂದು ಹೈದರಾಬಾದ್ ಯಾಚ್ ಕ್ಲಬ್ನ ಅಧ್ಯಕ್ಷ ಸುಹೇಯ್ಮ್ ಶೈಖ್ ತಿಳಿಸಿದ್ದಾರೆ.
ತೆಲಂಗಾಣ ರಾಜ್ಯಪಾಲೆ ತಮಿಳಿಸಾಯ್ ಸೌಂದರ್ರಾಜನ್ ಸೇಲಿಂಗ್ ಸಪ್ತಾಹಕ್ಕೆ ಚಾಲನೆ ನೀಡಿದ್ದಾರೆ.
ಹುಸೇನ್ ಸಾಗರದಲ್ಲಿ ರಾಷ್ಟ್ರಮಟ್ಟದ ಸೇಲಿಂಗ್ ಕೂಟ ಹಮ್ಮಿಕೊಳ್ಳಲಾಗಿದ್ದು, ದೇಶದ ನಾನಾ ಭಾಗಗಳಿಂದ ಕ್ರೀಡಾಪಟುಗಳು ಈ ಕೂಟದಲ್ಲಿ ಭಾಗವಹಿಸಲು ಮುತ್ತಿನ ನಗರಿಗೆ ಆಗಮಿಸುತ್ತಿದ್ದಾರೆ.