ಹೈದರಾಬಾದ್‌ನ ಘೋಷಾ ಮಹಲ್‌ನ ಚಂದನವಾಡಿ ಪ್ರದೇಶದಲ್ಲಿ ಚರಂಡಿಯ ಪಕ್ಕದ ರಸ್ತೆಯ ಒಂದು ಭಾಗ ಕುಸಿದು ಮೂವರು ಗಾಯಗೊಂಡಿದ್ದಾರೆ.
ಘಟನೆಯ ವೇಳೆ ಅನೇಕ ತರಕಾರಿ ಗಾಡಿಗಳು ಮತ್ತು ಕಾರು, ಆಟೋ ಮತ್ತು ದ್ವಿಚಕ್ರ ವಾಹನಗಳು ಭೂ ಭಾಗದೊಳಕ್ಕೆ ಕುಸಿದು ಬಿದ್ದವು.
ಶುಕ್ರವಾರ ರಸ್ತೆ ಮಾರುಕಟ್ಟೆಯೊಂದರಲ್ಲಿ ಈ ಘಟನೆ ನಡೆದಿದೆ. ಅಪಘಾತ ಸಂಭವಿಸಿದ ಕೂಡಲೇ ಪೊಲೀಸರು ಆಗಮಿಸಿ ಮಾರುಕಟ್ಟೆಗೆ ಬಂದಿದ್ದ ಜನರನ್ನು ಸ್ಥಳಾಂತರ ಮಾಡಿದರು. ಜಿಎಚ್‌ಎಂಸಿ ವಿಪತ್ತು ತಂಡ, ಎಂಜಿನಿಯರಿಂಗ್ ತಂಡ ಮತ್ತು ನಗರ ಯೋಜನಾ ತಂಡ ಒಟ್ಟಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ನಾಲಾ ಮೇಲೆ ಸಿಮೆಂಟ್ ಸ್ಲ್ಯಾಬ್ ಹಾಕಿ ಅದರ ಮೇಲೆ ರಸ್ತೆ ಹಾಕಲಾಗಿದೆ. ಚಪ್ಪಡಿ ಹಾಕಿರುವ ರಸ್ತೆಯ ಒಟ್ಟು ಉದ್ದ 500 ಅಡಿಯಿದೆ. ಅದರಲ್ಲಿ 70 ಅಡಿ ಉದ್ದದ ರಸ್ತೆ ಸುಮಾರು 10 ಅಡಿ ಅಗಲದಷ್ಟು 12 ಅಡಿ ಆಳಕ್ಕೆ ಕುಸಿದು ಬಿದ್ದಿದೆ.
ಘಟನೆಯ ನಂತರ ಘೋಷಾಮಹಲ್ ಶಾಸಕ ಟಿ. ರಾಜಾ ಸಿಂಗ್ ಮತ್ತು ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಕೂಡ ಸ್ಥಳಕ್ಕೆ ಆಗಮಿಸಿದರು. ರಸ್ತೆ ಗುಂಡಿ ಬಿದ್ದಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ, ರಸ್ತೆ ಕುಸಿತದ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ