
ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಮಹಿಳೆಯರು ರೇಷ್ಮೆ ಉಡುಪು ಧರಿಸಿದರೆ, ಪುರುಷರು ರೇಷ್ಮೆ ಧೋತಿ, ಪಂಚೆ ಮೊದಲಾದವುಗಳನ್ನು ಧರಿಸುತ್ತಾರೆ. ಇವುಗಳ ಬೆಲೆಯೂ ಅಷ್ಟೇನು ಹೆಚ್ಚಿರುವುದಿಲ್ಲ.
ಇದೀಗ ರಾಮರಾಜ್ ಕಾಟನ್ ಬ್ರಾಂಡ್, ಶುದ್ಧ ರೇಷ್ಮೆಯ ಧೋತಿಯನ್ನು ಬಿಡುಗಡೆ ಮಾಡಿದ್ದು, ಇದರ ಬೆಲೆ ಬರೋಬ್ಬರಿ ಒಂದು ಲಕ್ಷ ರೂಪಾಯಿಗಳು ಎಂದು ಹೇಳಲಾಗಿದೆ. ಹೈದರಾಬಾದಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಧೋತಿಯನ್ನು ಬಿಡುಗಡೆ ಮಾಡಲಾಗಿದೆ.
ಶುದ್ಧ ಚಿನ್ನದ ಅತ್ಯುತ್ತಮ ಎಳೆಗಳಿಂದ ಈ ಧೋತಿ ಅಲಂಕರಿಸಲ್ಪಟ್ಟಿದ್ದು, ಕೈನಿಂದ ನೇಯಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಧೋತಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ರೇಷ್ಮೆ ವಸ್ತ್ರಗಳನ್ನು ಧರಿಸುವುದರಿಂದ ಆಗುವ ದೈಹಿಕ ಹಾಗೂ ಮಾನಸಿಕ ಪ್ರಯೋಜನಗಳ ಕುರಿತು ವಿವರಿಸಲಾಗಿದೆ.