ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ವೈದ್ಯರು, ಪೊಲೀಸರು, ವಿಜ್ಞಾನಿಗಳು ಒಂದು ತರಹದ ಹೋರಾಟ ನಡೆಸಿ ಜನರನ್ನು ರಕ್ಷಿಸುತ್ತಿದ್ದಾರೆ. ಮತ್ತೊಂದೆಡೆ, ಲಸಿಕೆಯ ಮಹತ್ವ ಸಾರಲು ಸಣ್ಣಪುಟ್ಟ ವ್ಯಾಪಾರಿಗಳು ತಮ್ಮ ಕೈಲಾದ ಯತ್ನ ನಡೆಸುತ್ತಿದ್ದಾರೆ.
ತೆಲಂಗಾಣದ ಹೈದರಾಬಾದ್ನಲ್ಲಿ ರಾಖಿ ಮಾರಾಟ ಮಾಡುವ ಅಂಗಡಿಗಳು, ಕೊರೊನಾ ಲಸಿಕೆಯ ಎರಡೂ ಡೋಸ್ ಪೂರೈಸಿದವರಿಗೆ ಮುಖಬೆಲೆಯ ಶೇ.50ರಷ್ಟು ಕಡಿಮೆ ಬೆಲೆಗೆ ರಾಖಿಗಳನ್ನು ಮಾರಾಟ ಮಾಡುತ್ತಿವೆ.
ಈ ಮೂಲಕ ಹಿಂಜರಿಕೆ ಇಲ್ಲದೆಯೇ ಸ್ಥಳೀಯವಾಗಿ ಲಭ್ಯವಾಗುವ ಕೊರೊನಾ ತಡೆ ಲಸಿಕೆಯನ್ನು ಜನಸಾಮಾನ್ಯರು ಆದಷ್ಟು ಬೇಗ ಹಾಕಿಸಿಕೊಳ್ಳಲು ಉತ್ತೇಜಿಸುತ್ತಿದ್ದಾರೆ.
ನವ ವಧು-ವರರಿಗೆ ಹಾಸ್ಯನಟ ಕೊಟ್ಟ ಗಿಫ್ಟ್ ಏನು ಗೊತ್ತಾ….?
ಈ ಬಗ್ಗೆ ಅಂಗಡಿ ಮಾಲೀಕರಾದ ಪವನ್ ಅವರು ಸುದ್ದಿಸಂಸ್ಥೆಯ ಜತೆಗೆ ಮಾತನಾಡಿ,” ಕಳೆದ ವರ್ಷ ಲಾಕ್ಡೌನ್ನಿಂದ ರಕ್ಷಾಬಂಧನ ಸಂಭ್ರಮಾಚರಣೆ ಕಳೆಗುಂದಿತು. ಜನರು ರಾಖಿ ಖರೀದಿಸಲು ಮುಗಿಬೀಳಲಿಲ್ಲ. ಭಾರಿ ನಷ್ಟ ಅನುಭವಿಸಿದೆವು. ಆದರೆ ಈ ಬಾರಿ ಜನರನ್ನು ಆಕರ್ಷಿಸುವ ಜತೆಗೆ ಕೊರೊನಾ ಹಬ್ಬದಂತೆ ತಡೆಯುವ ಕರ್ತವ್ಯವೂ ನಮ್ಮದಾಗಿದೆ. ಹಾಗಾಗಿ ಲಸಿಕೆ ಪಡೆದ ಪ್ರಮಾಣಪತ್ರ ಪರಿಶೀಲಿಸಿ, ಅಂಥವರಿಗೆ 50% ರಿಯಾಯಿತಿ ಕೊಡುತ್ತಿದ್ದೇವೆ” ಎಂದಿದ್ದಾರೆ.