![](https://kannadadunia.com/wp-content/uploads/2023/07/80ba2d718cc07395374cffe7d1d9769b14d46f6c9b24fd94f1fe793632017f96-1024x683.jpg)
ಹೈದ್ರಾಬಾದ್ನ ಪಂಜಾಬ್ ನ್ಯಾಶನಲ್ ಬ್ಯಾಂಕ್ ಎಟಿಎಂನಲ್ಲಿ, ವ್ಯಕ್ತಿಯೊಬ್ಬರು ಹಣವನ್ನ ಠೇವಣಿ ಇಡುವುದಕ್ಕೆ ಹೋಗಿದ್ದಾರೆ. ಆ ಸಮಯದಲ್ಲಿ ಇಬ್ಬರು ಅನಾಮಿಕರು ಹಿಂದಿನಿಂದ ಹೋಗಿ, ಠೇವಣಿ ಇಡುವುದಕ್ಕೆ ಹೋಗಿದ್ದ ವ್ಯಕ್ತಿಯ ಮೇಲೆ ಪೆಪ್ಪರ್ ಸ್ಪ್ರೆ ಮಾಡಿದ್ದಾರೆ. ಕೊನೆಗೆ ಆ ವ್ಯಕ್ತಿಯ ಕೈಯಲ್ಲಿದ್ದ 7 ಲಕ್ಷ ಹಣವನ್ನ ದೋಚಿಕೊಂಡು ಎಸ್ಕೇಪ್ ಆಗಿದ್ದಾರೆ. ಆ ಸಮಯದಲ್ಲಿ ಕಳ್ಳರ ಹಾಗೂ ಗ್ರಾಹಕನ ನಡುವೆ ಜಟಾಪಟಿ ನಡೆದಿದೆ. ಈ ಘಟನೆಯು ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗ್ರಾಹಕನನ್ನ ದೋಚಿದ ಆ ಇಬ್ಬರು ವ್ಯಕ್ತಿಗಳಲ್ಲಿ ಓರ್ವ ಮಾಸ್ಕ್ ಹಾಕಿಕೊಂಡಿದ್ದು, ಇನ್ನೊಬ್ಬ ಮುಖವೇ ಕಾಣಿಸದಂತೆ ಹೆಲ್ಮೆಟ್ ಹಾಕಿಕೊಂಡು ಬಂದಿರುವುದು, ಈ ಸಿಸಿ ಟಿವಿಯ ಈ ದೃಶ್ಯದಲ್ಲಿ ಗಮನಿಸಬಹುದು. ಅಷ್ಟೆ ಅಲ್ಲ ಈ ಇಬ್ಬರು ಲೂಟಿಕೋರರಿಗೆ ಇನ್ನೂ ಇಬ್ಬರು ಸಾಥ್ ಕೊಟ್ಟಿದ್ದಾರೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ನಾಲ್ವರನ್ನೂ ಬಂಧಿಸಿದ್ದಾರೆ. ಹಾಗೂ ಅವರು ಈ ಲೂಟಿ ಕಾರ್ಯಕ್ಕೆ ಬಳಸಿರುವ ಒಂದು ಕಾರು ಹಾಗೂ ಒಂದು ಬೈಕ್ ಕೂಡ ಪೊಲೀಸರು ವಶಪಡಿಸಿಕೊಂಡಿದ್ಧಾರೆ.