ತೆಲಂಗಾಣದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದಲ್ಲಿ ಹೈದರಾಬಾದ್ ಹೆಸರನ್ನು ಭಾಗ್ಯ ನಗರ ಎಂದು ಬದಲಾಯಿಸುತ್ತೇವೆ ಎಂದು ಜಾರ್ಖಂಡ್ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ರಘುಬರ್ ದಾಸ್ ಹೇಳಿದ್ದಾರೆ.
ಹೈದರರಾಬಾದ್ ಹೆಸರನ್ನು ಭಾಗ್ಯ ನಗರ ಎಂದು ಬದಲಾಯಿಸುತ್ತೀರೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತವಾಗಿಯೂ ಬದಲಾಯಿಸುತ್ತೇವೆ.
ಕಳೆದ 2 ದಿನಗಳಿಂದ ನಾನು ಗಮನಿಸಿದಂತೆ ಶ್ರೀ ಸಾಮಾನ್ಯನಿಂದ ಹಿಡಿದು ದೊಡ್ಡ ಉದ್ಯಮಿಗಳವರೆಗೆ ಎಲ್ಲರಿಗೂ ಟಿಆರ್ಎಸ್ ಸರ್ಕಾರದ ಬಗ್ಗೆ ಅಸಮಾಧಾನವಿದೆ. ಈ ಸರ್ಕಾರಕ್ಕೆ ತೆಲಂಗಾಣ ಜನತೆಗಿಂತ ಕುಟುಂಬ ರಾಜಕಾರಣದ ಬಗ್ಗೆ ಹೆಚ್ಚು ಆಸಕ್ತಿ ಇರುವಂತೆ ತೋರುತ್ತಿದೆ. ಹೀಗಾಗಿ ಜನರು ವಂಶ ರಾಜಕಾರಣವನ್ನು ಕೊನೆಗಾಣಿಸಲು ಬಿಜೆಪಿ ಪರ ಒಲವು ತೋರಿದ್ದಾರೆ ಎಂದು ಹೇಳಿದರು.
ಹೈದರಾಬಾದ್ನ ಚಾರ್ಮಿನಾರ್ನಲ್ಲಿರುವ ಭಾಗ್ಯಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ದರ್ಶನವನ್ನು ಪಡೆದ ಬಳಿಕ ಮಾತನಾಡಿದ ಅವರು ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಹೈದರಾಬಾದ್ ಹೆಸರು ಮರುನಾಮಕರಣಗೊಳ್ಳಲಿದೆ ಎಂದು ಹೇಳಿದರು.