Big News: ಮಯನ್ಮಾರ್ ಪ್ರಧಾನಿ ಮೊಮ್ಮಗನ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ ಭಾರತೀಯ ವೈದ್ಯರ ತಂಡ 06-01-2022 8:44PM IST / No Comments / Posted In: Latest News, Live News, International ಮ್ಯಾನ್ಮಾರ್ ಪ್ರಧಾನಿ ಮೊಮ್ಮಗನಿಗೆ ಶಸ್ತ್ರಚಿಕಿತ್ಸೆ ಮಾಡಲು ಹೈದರಾಬಾದ್‌ನ ರೈನ್‌ಬೋ ಚಿಲ್ಡ್ರನ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನ(RCHI) ಇಬ್ಬರು ಹಿರಿಯ ವೈದ್ಯರನ್ನ ಆಹ್ವಾನಿಸಲಾಗಿತ್ತು. ಹಿರಿಯ ಹೃದ್ರೋಗ ತಜ್ಞರಾದ ಡಾ.ನಾಗೇಶ್ವರ ರಾವ್ ಕೊನೇಟಿ ಮತ್ತು ಡಾ.ಶ್ವೇತಾ ಬಖ್ರು ಅವರು ಕಳೆದ ವಾರ ಮ್ಯಾನ್ಮಾರ್‌ನ ಯಾಂಗೋನ್‌ಗೆ ಶಸ್ತ್ರ ಚಿಕಿತ್ಸೆ ಮಾಡಲು ತೆರಳಿದ್ದರು. 9 ತಿಂಗಳ ಮಗು ಜನ್ಮಜಾತ ಹೃದಯ ಕಾಯಿಲೆಯಿಂದ ಬಳಲುತ್ತಿತ್ತು. ಮಗು ಹೃದಯ ವೈಫಲ್ಯಕ್ಕೆ ತುತ್ತಾಗಿತ್ತು. ಮಯನ್ಮಾರ್ ವೈದ್ಯರೊಂದಿಗೆ ಭಾರತದಿಂದ ತೆರಳಿದ ತಂಡವು, ‘ಟ್ರಾನ್ಸ್‌ಕ್ಯಾಥೆಟರ್ ಡಿವೈಸ್ ಕ್ಲೋಸರ್’ ಶಸ್ತ್ರಚಿಕಿತ್ಸೆಯನ್ನ ಯಶಸ್ವಿಯಾಗಿ ನಡೆಸಿತು. ಮರುದಿನವೆ ಚೇತರಿಸಿಕೊಂಡ ಮಗುವನ್ನ ಡಿಸ್ಚಾರ್ಜ್ ಮಾಡಲಾಯಿತು. ದಿವಂಗತ ಡಾ ಅಬ್ದುಲ್ ಕಲಾಂ ಅವರು, ಕೇರ್ ಫೌಂಡೇಶನ್ ಸಹಾಯದಿಂದ ಭಾರತ ಮತ್ತು ಮ್ಯಾನ್ಮಾರ್ ಸಹಯೋಗದಲ್ಲಿ ಮಕ್ಕಳ ಹೃದ್ರೋಗ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಅಲ್ಲಿ ಡಾ ರಾವ್ ಅವರು ಮ್ಯಾನ್ಮಾರ್‌ನಲ್ಲಿ ಮಕ್ಕಳ ಹೃದ್ರೋಗ ಮತ್ತು ಹೃದಯ ಶಸ್ತ್ರಚಿಕಿತ್ಸೆಯ ಕ್ಷೇತ್ರಗಳಲ್ಲಿ 10 ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದ್ದಾರೆ. ವೈದ್ಯರಿಗೆ ತರಬೇತಿ ನೀಡುವುದರ ಜೊತೆಗೆ ಮಕ್ಕಳಿಗೆ ಚಿಕಿತ್ಸೆ ನೀಡಲು ಅವರು ಹಲವಾರು ಬಾರಿ ಮ್ಯಾನ್ಮಾರ್‌ಗೆ ಪ್ರಯಾಣಿಸಿದ್ದಾರೆ. ಅವರ ಶ್ರೇಷ್ಠತೆ ಮತ್ತು ಅನುಭವದ ಕಾರಣದಿಂದಾಗಿ, ಮ್ಯಾನ್ಮಾರ್‌ನ ಪ್ರಧಾನಿ ಮತ್ತು ಅವರ ಮಗ, ಡಾ ರಾವ್ ಮತ್ತು ಅವರ ವೈದ್ಯರ ತಂಡವನ್ನು ಶಸ್ತ್ರ ಚಿಕಿತ್ಸೆ ಮಾಡಲು ಆಹ್ವಾನಿಸಿತ್ತು.