ವೈಯಕ್ತಿಕ ಸೇವನೆಗೆಂದು ತನ್ನ ಮನೆಯ ಮಹಡಿ ಮೇಲೆ ಗಾಂಜಾ ಬೆಳೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ ಪೊಲೀಸರು 10 ಪ್ಯಾಕೆಟ್‌ನಷ್ಟು ಗಾಂಜಾ ವಶಕ್ಕೆ ಪಡೆದಿದ್ದಾರೆ, ಆತನನ್ನು ರೇವಂತ್ ವರ್ಮಾ ಎಂದು ಗುರುತಿಸಲಾಗಿದೆ.
ಆಂಧ್ರ ಪ್ರದೇಶದಿಂದ ಈ ಸಸಿಯ ಬೀಜಗಳನ್ನು ತಂದಿದ್ದು, ವೈಯಕ್ತಿಕ ಬಳಕೆಗೆ ಮಾತ್ರವೇ ಗಾಂಜಾ ಬೆಳೆಯುತ್ತಿರುವುದಾಗಿ ತನಿಖೆ ವೇಳೆ ವರ್ಮಾ ಹೇಳಿಕೊಂಡಿದ್ದಾನೆ. ಗಾಂಜಾ ಗಿಡಗಳನ್ನು ನಾಶಪಡಿಸಿದ ಪೊಲೀಸರು ಆತನ ಬಳಿ ಇದ್ದ ಕ್ಯಾನಬಿ ಬೀಜಗಳನ್ನು ವಶಕ್ಕೆ ಪಡೆದಿದ್ದಾರೆ.
ಮಾದಕ ದ್ರವ್ಯಗಳ ನಿಷೇಧ ಕಾಯಿದೆಯಡಿ ವರ್ಮಾ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಆತನನ್ನು ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.