ಲೇಖನಿ ಖಡ್ಗಕ್ಕಿಂತ ಶಕ್ತಿಶಾಲಿ ಎಂಬ ಮಾತಿದೆ, ಹೈದರಾವಾದ್ ನಿವಾಸಿ ಆಚಾರ್ಯ ಮಾಕುನೂರಿ ಶ್ರೀನಿವಾಸ ಅವರ ಪಾಲಿಗೆ ಈ ಮಾತು ಅಕ್ಷರಶಃ ನಿಜವಾಗಲೂಬಹುದು.
ಏಕೆ ಗೊತ್ತೆ? ತಮ್ಮಸಹಯೋಗಿಗಳ ಜತೆ ಸೇರಿ ಅವರು ಪೆನ್ನೊಂದು ಸಿದ್ಧಪಡಿಸಿದ್ದು. ಈ ಪೆನ್ ಈಗ ವಿಶ್ವದಾಖಲೆ ಪಟ್ಟಿಗೆ ಸೇರಿದೆ. ಅಂದ ಹಾಗೆ ಇದು ಸಿದ್ಧವಾಗಿ ಹತ್ತು ವರ್ಷವೇ ಕಳೆದಿದೆ. ಈಗ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿದೆ.
ಮೇ.16ರಿಂದ ಶಾಲೆಗಳು ಪುನರಾರಂಭ; ಇನ್ನೂ ಪೂರೈಕೆಯಾಗದ ಪಠ್ಯಪುಸ್ತಕ
ಶ್ರೀನಿವಾಸ್ ತಂಡವು ಬಾಲ್ ಪಾಯಿಂಟ್ ಪೆನ್ ಅನ್ನು ಹೊತ್ತೊಯ್ಯುವ ಮತ್ತು ಅದರಿಂದ ಬರೆಯುವುದನ್ನು ತೋರಿಸುವ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಪೆನ್ ಪ್ರದರ್ಶನಕ್ಕೆ ಮಾತ್ರವಲ್ಲ, ಬರೆಯಲೂ ಬರುತ್ತದೆ ಎಂಬುದನ್ನು ಈ ತಂಡ ಚಿತ್ರ ಬರೆಯುವ ಮೂಲಕ ತೋರಿಸಿದೆ. ಇಡೀ ತಂಡ ದೊಡ್ಡ ಪೆನ್ನನ್ನು ಹಿಡಿದು ವ್ಯಂಗ್ಯಚಿತ್ರವನ್ನು ಬರೆದು ಪೆನ್ನಿನ ವಿಶೇಷತೆ ವಿವರಿಸಿದ್ದಾರೆ.
ವಿಶ್ವದ ಅತಿದೊಡ್ಡ ಈ ಬಾಲ್ ಪಾಯಿಂಟ್ ಪೆನ್ 18 ಅಡಿ ಉದ್ದವಿದೆ. 37.23 ಕಿಲೋಗ್ರಾಂಗಳಷ್ಟು ತೂಗುತ್ತದೆ. ಹಿತ್ತಾಳೆಯ ಹೊರ ಕವಚ ಒಂಬತ್ತು ಕಿಲೋಗ್ರಾಂ ತೂಗುತ್ತದೆ.