ಉನ್ನತ ದರ್ಜೆಯವರು ಎಂಬ ತೋರ್ಪಡಿಕೆ ಜತೆಗೆ ಆರ್ಥಿಕವಾಗಿ ದುರ್ಬಲರಾದವರನ್ನು ಸಬಲರು ದೌರ್ಜನ್ಯಕ್ಕೆ ದೂಡುತ್ತಿರುವ ಪ್ರಕರಣ ಎಂದು ಕರೆಯಲಾಗಿರುವ ಘಟನೆಯೊಂದು ಹೈದರಾಬಾದ್‌ನಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.
ನೂರಾರು ಫ್ಲ್ಯಾಟ್‌ಗಳಿರುವ ಹೌಸಿಂಗ್ ಸೊಸೈಟಿಯೊಂದು ತನ್ನ ಲಿಫ್ಟ್‌ಗಳನ್ನು ಮನೆಕೆಲಸದವರು, ವಾಹನ ಚಾಲಕರು ಮತ್ತು ಡೆಲಿವರಿ ಬಾಯ್‌ಗಳು ಬಳಸುತ್ತಿರುವ ವಿರುದ್ಧ ಕಠಿಣ ಕ್ರಮವಾಗಿ 300 ರೂ. ದಂಡ ವಿಧಿಸಿದೆ. ಈ ಬಗ್ಗೆ ಎಚ್ಚರಿಕೆಯ ದೊಡ್ಡ ಫಲಕವನ್ನೇ ಸೊಸೈಟಿಯಲ್ಲಿ ಅಂಟಿಸಿದೆ.
ಇದನ್ನು ಫೋಟೊಜರ್ನಲಿಸ್ಟ್ ಒಬ್ಬರು ಟ್ವಿಟರ್‌ನಲ್ಲಿ ಹರಿಬಿಟ್ಟಿದ್ದಾರೆ. 2022ರ ಸೈಬರ್ ರಾಜಧಾನಿ ಎಂಬ ಖ್ಯಾತಿಯ ’’ಹೈದರಾಬಾದ್’’ನಲ್ಲಿ ಇಂಥ ಜನಾಂಗೀಯ ತಾರತಮ್ಯವಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮದೇ ಮನೆಗಳಿಗೆ ಕೆಲಸಕ್ಕಾಗಿ ಬರುವವರ ಜತೆಗೆ ಹಣ-ಅಂತಸ್ತು ಉಳ್ಳವರು ನಡೆಸಿಕೊಳ್ಳುವ ಕೀಳುಮಟ್ಟದ ಮನಸ್ಥಿತಿಯಿದು. ಇಂಥ ದೌರ್ಜನ್ಯ ಕೊನೆಗಾಣಬೇಕು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸೊಸೈಟಿಗೆ ನೋಟಿಸ್ ನೀಡಬೇಕು ಎಂದು ಟ್ವೀಟಿಗರು ಆಕ್ರೋಶ ಹೊರಹಾಕಿದ್ದಾರೆ.
‘ಪ್ಲಾಸ್ಟಿಕ್’ ಬಾಟಲ್ ನಲ್ಲಿ ನೀರು ಕುಡಿಯದಿರಿ…!
ತೆಲಂಗಾಣದ ಹಲವು ವಕೀಲರು ಸೊಸೈಟಿಗೆ ಎಚ್ಚರಿಕೆ ನೀಡಿ ಕರೆ ಕೂಡ ಮಾಡಿದ್ದಾರೆ. ಆಮ್ ಆದ್ಮಿ ಪಾರ್ಟಿ ಸೇರಿದಂತೆ ಸ್ಥಳೀಯ ಪಕ್ಷ ಗಳ ಮುಖಂಡರು ಕೂಡ ಸೊಸೈಟಿಯ ವರ್ತನೆ ಖಂಡಿಸಿದ್ದಾರೆ. ಕಾರ್ಮಿಕ ಸಂಘಟನೆಗಳ ನಾಯಕರು ಕೂಡ ಸೊಸೈಟಿಗೆ ಮುತ್ತಿಗೆ ಹಾಕುವ ಸಿದ್ಧತೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಇದೆಲ್ಲಕ್ಕೂ ಸಬೂಬಾಗಿ ಸೊಸೈಟಿಯು ಹೇಳುತ್ತಿರುವುದು, ಇದು ಜನಾಂಗೀಯ ದೌರ್ಜನ್ಯವಲ್ಲ. ಕೊರೊನಾ ಮುನ್ನೆಚ್ಚರಿಕೆ ಅಷ್ಟೇ. ಕೊರೊನಾ ಕಡಿಮೆ ಆದ ಬಳಿಕ ಯಾರು ಬೇಕಾದರೂ ಲಿಫ್ಟ್ ಬಳಸಬಹುದು ಎನ್ನುತ್ತಿದೆ.
ಇತ್ತೀಚೆಗೆ ಜೈಪುರದ ಮಾಲ್‌ವೊಂದರಲ್ಲಿ ಡೆಲಿವರಿ ಬಾಯ್ಸ್‌ಗಳು ಲಿಫ್ಟ್ ಬಳಸುವಂತಿಲ್ಲ ಎಂಬ ನೋಟಿಸ್ ಹಾಕಲಾಗಿತ್ತು. ಇದು ಭಾರಿ ಆಕ್ಷೇಪಕ್ಕೆ ಕಾರಣವಾಗಿತ್ತು.
https://twitter.com/NumeroFortyTwo/status/1481336351840686083?ref_src=twsrc%5Etfw%7Ctwcamp%5Etweetembed%7Ctwterm%5E1481336351840686083%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-news-hyderabad-housing-society-rs-300-fine-maids-delivery-guys-using-main-lift-twitter-enraged-5184764%2F