ಹೈದರಾಬಾದ್: ಚಾಕು ತೋರಿಸಿ ಬೆದರಿಸಿ 7 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
7 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ಕದ್ದಿದ್ದಕ್ಕಾಗಿ 33 ವರ್ಷದ ಚಾಲಕ ವಿ. ಶ್ರೀನಿವಾಸ್ ಅವರನ್ನು ಬಂಧಿಸಲಾಗಿದೆ. ಅಪರಾಧದ ದಿನದಂದು ತನ್ನ ಸಹೋದ್ಯೋಗಿಯೊಬ್ಬರಿಗೆ ಚಾಕುವಿನಿಂದ ಬೆದರಿಕೆ ಹಾಕಿದ್ದ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 17 ರಂದು, ರಾಧಿಕಾ ಡೈಮಂಡ್ಸ್ ಮಾರಾಟ ಪ್ರತಿನಿಧಿ ಅಕ್ಷಯ್ ಕುಮಾರ್ ಮನೆಗಳಿಗೆ ವಜ್ರಖಚಿತ ಚಿನ್ನಾಭರಣಗಳನ್ನು ವಿತರಿಸಲು ಹೋದಾಗ, ಅವರು 7 ಕೋಟಿ ರೂಪಾಯಿ ಮೌಲ್ಯದ ಉಳಿದ ಆಭರಣಗಳನ್ನು ಕಾರಿನಲ್ಲಿ ಬಿಟ್ಟು ಹೋಗಿದ್ದರು ಎಂದು ಪೊಲೀಸ್ ಉಪ ಆಯುಕ್ತ(ಪಶ್ಚಿಮ ವಲಯ) ಜೋಯಲ್ ಡೇವಿಸ್ ತಿಳಿಸಿದ್ದಾರೆ. .
ಅಕ್ಷಯ್ ಕರ್ತವ್ಯ ಮುಗಿಸಿ ಕಾರಿಗೆ ಹಿಂತಿರುಗಿದಾಗ ಶ್ರೀನಿವಾಸ್ ಪರಾರಿಯಾಗಿದ್ದಾನೆ. ಸಹೋದ್ಯೋಗಿ ಅಭಿನಾಸ್ ಆಟೋವನ್ನು ನಿಲ್ಲಿಸಲು ಯತ್ನಿಸಿದ್ದು, ಶ್ರೀನಿವಾಸ್ ಚಾಕುವಿನಿಂದ ಬೆದರಿಕೆ ಹಾಕಿದ್ದಾನೆ. ಐಷಾರಾಮಿ ಜೀವನ ನಡೆಸಬೇಕು ಎಂಬ ಕಾರಣಕ್ಕೆ ಹೀಗೆ ಮಾಡಿರುವುದಾಗಿ ಆರೋಪಿ ಹೇಳಿದ್ದಾನೆ. ಅಪರಾಧ ಕೃತ್ಯದ ನಂತರ ಪಶ್ಚಿಮ ಗೋದಾವರಿ ಜಿಲ್ಲೆಗೆ ಪ್ರಯಾಣ ಬೆಳೆಸಿದ್ದ. ಆರೋಪಿ ಶ್ರೀನಿವಾಸ್ ನನ್ನು ಈಗಾಗಲೇ ಬಂಧಿಸಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.